
ಕೋಟ: ಧಾರ್ಮಿಕ ಪರಂಪರೆಯನ್ನು ಗಟ್ಟಿಗೊಳಿಸಲು ಮದ್ದು ಕೃಷ್ಣ ಸ್ಪರ್ಧಾ ಕಾರ್ಯಕ್ರಮ ಸಹಕಾರಿ ಈ ನಿಟ್ಟಿನಲ್ಲಿ ಸಂಘಸoಸ್ಥೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ಹೇಳಿದರು.
ಭಾನುವಾರ ಸಾಲಿಗ್ರಾಮ ದೇಗುಲದ ಕೂಟ ಬಂಧು-ಭವನದಲ್ಲಿ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇವರ ಆಶ್ರಯದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆ ಇವರ ನೇತೃತ್ವದಲ್ಲಿ ದಿ| ಇಂದಿರಾ ಮಧ್ಯಸ್ಥ ಇವರ ಸ್ಮರಣಾರ್ಥ ಇವರ ಮಕ್ಕಳು ಪಾರಂಪಳ್ಳಿ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆ, ಶ್ರೀಕೃಷ್ಣ ಇಂಡಸ್ತ್ರೀಯಲ್ ಕೋ-ಅಪರೇಟಿವ್ ಸೊಸೈಟಿ, ಉಡುಪಿ ಪುಂಡಲೀಕ ಪೈ ನಂದಿನಿ ಮಿಲ್ಕ್ ಪಾರ್ಲರ್ ಸಾಲಿಗ್ರಾಮ,ಎ.ಪಿ. ಅಡಿಗ ಅಸೋಸಿಯೇಟ್ಸ್ ಉಳ್ಳೂರು, ಗೆಳೆಯರ ಬಳಗ ಕಾರ್ಕಡ-ಸಾಲಿಗ್ರಾಮ ,ವಿಪ್ರ ಮಹಿಳಾ ಸಾಲಿಗ್ರಾಮ ವಲಯ ಇವರ ಸಹಯೋಗದೊಂದಿಗೆ ಮುದ್ದುಕೃಷ್ಣ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳ ಭೌತಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುತ್ತಿರುವ ಸ್ಪರ್ಧಾ ಕಾರ್ಯಕ್ರಮಗಳು ಚಟುವಟಿಕೆಯ ಕೇಂದ್ರವಾಗಿ ಮೂಡಿದೆ, ಪೌರಾಣಿಕ ಹಿನ್ನಲ್ಲೆಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಸ್ಥಾನ ನೀಡಲಾಗಿದೆ ಇದನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸುವ ಕಾರ್ಯ ಇಂತಹ ಕಾರ್ಯಕ್ರಮಗಳಿಂದಾಗುತ್ತಿದೆ ಇದೊಂದು ಅಭೂತಪೂರ್ವ ಕಾರ್ಯಕ್ರಮಗಳ ಸಾಲಿಗೆ ಸೇರಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ವೇದಿಕೆ ಕೂಟ ಮಹಾಜಗತ್ತುಸಾಲಿಗ್ರಾಮ ಅಂಗಸoಸ್ಥೆ ಇದರ ಅಧ್ಯಕ್ಷ ಗಿರೀಶ್ ಮಯ್ಯ ವಹಿಸಿದ್ದರು.ಮುಖ್ಯ ಅಭ್ಯಾಗತರಾಗಿ ಕೃಷಿಕರಾದ ಪಿ. ರಘು ಮಧ್ಯಸ್ಥ, ಪಾರಂಪಳ್ಳಿ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆ ಅಧ್ಯಕ್ಷ ಪಿ. ಚಂದ್ರಶೇಖರ ಹೊಳ್ಳ, ಶ್ರೀ ಕೃಷ್ಣ ಸೊಸೈಟಿ ಸಿಇಒ ಶಶಿಧರ ಮಯ್ಯ ,ಕೂಟ ಮಹಾಜಗತಿನ ಪ್ರಧಾನ ಕಾರ್ಯದರ್ಶಿ ಸುರೇಶ್ ತುಂಗ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಎ.ಪಿ.ಅಡಿಗ ಅಸೋಸಿಯೇಟ್ಸ್, ಉಳ್ಳೂರು ಮುಖ್ಯಸ್ಥ ಗಣೇಶ್ ಅಡಿಗ, ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಅಧ್ಯಕ್ಷೆ ವನಿತಾ ಉಪಾಧ್ಯ, ನಂದಿನಿ ಮಿಲ್ಕ್ ಪಾರ್ಲರ್ ಸಾಲಿಗ್ರಾಮ ಮಾಲಿಕ ಪುಂಡಲೀಕ ಪೈ , ಯುವ ವೇದಿಕೆಯ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಪಿ.ವೈ ಹೇರ್ಳೇ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸುಜಾತಾ ಬಾಯರಿ ನಿರೂಪಿ,ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಯ್ಯ ಸ್ವಾಗತಿಸಿ, ಶ್ರೀಕಾಂತ್ ಐತಾಳ್ ವಂದಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ೨ವರ್ಷದ ಮಯೋಮಿತಿಯಲ್ಲಿ ಪ್ರಥಮ ಸ್ಥಾನವನ್ನು ಶ್ರೀಶ ಕೆದ್ಲಾಯ ಸಾಲಿಗ್ರಾಮ , ದ್ವಿತೀಯ ಜಗನ್ಮಯ್ ಬೆಂಗಳೂರು , ತೃತೀಯ ಅನ್ವಿ ನವೀನ್ಯ ಆಚಾರ್ ಸಾಲಿಗ್ರಾಮ , ೨-೪ ವರ್ಷದ ವಿಭಾಗದಲ್ಲಿ ಪ್ರಥಮ ಶೌರ್ಯ ನಕ್ಷತ್ರ ಸಾಲಿಗ್ರಾಮ, ದ್ವಿತೀಯ ಶ್ರೀಧರ್ ಕೆ ಕಾಂಚನ್ ಸೈಬ್ರಕಟ್ಟೆ , ತೃತೀಯ ರಿಷಿಕ ಆಚಾರ್,ಕಾಳಾವರ, ೪-೬ ವರ್ಷದ ವಿಭಾಗ ಪ್ರಥಮ ವೈ ಆರಾಧ್ಯ ಭಟ್, ಹಂಗಾರಕಟ್ಟೆ ದ್ವಿತೀಯ ಅಗಮ್ಯ ಶೆಟ್ಟಿ ಸಿದ್ದಾಪುರ, ತೃತೀಯ ಶ್ರೀಯಾ.ಕೆ .ಕಾಂಚನ ಸಾಲಿಗ್ರಾಮ ಪಡೆದುಕೊಂಡರು.
ಗುರುನರಸಿoಹ ದೇವಸ್ಥಾನ ಸಾಲಿಗ್ರಾಮ ಇವರ ಆಶ್ರಯದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆ ಇವರ ನೇತೃತ್ವದಲ್ಲಿ ಮುದ್ದುಕೃಷ್ಣ ಸ್ಪರ್ಧೆ ಕಾರ್ಯಕ್ರಮವನ್ನು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ಉದ್ಘಾಟಿಸಿದರು.ಕೃಷಿಕರಾದ ಪಿ. ರಘು ಮಧ್ಯಸ್ಥ, ಪಾರಂಪಳ್ಳಿ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆ ಅಧ್ಯಕ್ಷ ಪಿ. ಚಂದ್ರಶೇಖರ ಹೊಳ್ಳ, ಶ್ರೀ ಕೃಷ್ಣ ಸೊಸೈಟಿ ಸಿಇಒ ಶಶಿಧರ ಮಯ್ಯ , ಕೂಟ ಮಹಾಜಗತಿನ ಪ್ರಧಾನ ಕಾರ್ಯದರ್ಶಿ ಸುರೇಶ್ ತುಂಗ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಇದ್ದರು.
Leave a Reply