
ಕೋಟ: ಚೇತನಾ ಪ್ರೌಢಶಾಲೆ ,ಹಂಗಾರಕಟ್ಟೆ ಇಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಹರ್ಷವರ್ಧನ ಶೆಟ್ಟಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಬಗ್ಗೆ ಹಾಗೂ ದಿನದ ವಿಶೇಷತೆಯನ್ನು ಕುರಿತು ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಕ್ಲಬ್ನ ಪದಾಧಿಕಾರಿಗಳಾದ ಮುರಳಿಧರ್ ನಾಯಿರಿ ಸುಲತಾ ಹೆಗ್ಡೆ, ಲೀಲಾವತಿ ಗಂಗಾಧರ್, ವೆಂಕಟೇಶ್ ಭಟ್, ಡಾ ರಶ್ಮಿ ಮುರಳಿಧರ್ ನಾಯರಿ, ಅಮಿತಾ ಉಮೇಶ್ ,ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಕು.ವನಿಶಾ,ಕು. ಶ್ರಾವ್ಯ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕ್ರೀಡಾ ದಿನದ ಪ್ರತಿಜ್ಞಾ ಸ್ವೀಕಾರ ಮಾಡಿದರು. ಕು. ಸುಪ್ರಭಾ ಕಾರ್ಯಕ್ರಮ ನಿರೂಪಿಸಿದರು.
ಹಂಗಾರಕಟ್ಟೆ ಚೇತನಾ ಪ್ರೌಢಶಾಲೆ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಹರ್ಷವರ್ಧನ ಶೆಟ್ಟಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಬಗ್ಗೆ ಹಾಗೂ ದಿನದ ವಿಶೇಷತೆಯನ್ನು ಕುರಿತು ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಕ್ಲಬ್ನ ಪದಾಧಿಕಾರಿಗಳಾದ ಮುರಳಿಧರ್ ನಾಯಿರಿ ಸುಲತಾ ಹೆಗ್ಡೆ ಇದ್ದರು.
Leave a Reply