
ಕೋಟ: ಇಲ್ಲಿನ ಸಾಸ್ತಾನದ ಪಾಂಡೇಶ್ವರ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ನಡೆಸಲ್ಪಡುವ 32ನೇ ವರ್ಷದ ಶಾದರ ಉತ್ಸವ ಕಾರ್ಯಕ್ರಮ ಇದೇ ಸೆಪ್ಟೆಂಬರ್ 29ರಿಂದ ಅ.2ರ ತನಕ ನಡೆಯಲಿದ್ದು ಈ ಪ್ರಯುಕ್ತ ಇದರ ಪೋಸ್ಟರ್ ಅನ್ನು ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ಮಂಗಳವಾರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಬಿಡುಗಡೆಯ ಸಮಾರಂಭದಲ್ಲಿ ಶಾರದೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ, ಕಾರ್ಯದರ್ಶಿ ದಿನಕರ ಪಾಂಡೇಶ್ವರ, ಕೋಶಾಧಿಕಾರಿ ವಿಶ್ವನಾಥ್ ಆಚಾರ್ಯ, ಸಮಿತಿಯ ಪ್ರಮುಖರಾದ ಲೀಲಾವತಿ ಗಂಗಾಧರ ಪೂಜಾರಿ, ಆರ್ ಪಿ. ಆನಂದ, ಸುರೇಶ್ ಪೂಜಾರಿ ತೀರ್ಥಬೈಲ್, ಪ್ರಮೋದ ಪೂಜಾರಿ , ಅಮಿತಾ, ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಚಂದ್ರ ಶೇಖರ ಆಚಾರ್ಯ ಕೋಟ ,ಮಾಜಿ ಟ್ರಸ್ಟಿ ಚಂದ್ರ ಪೂಜಾರಿ ಕೋಟ ಇದ್ದರು.ಸಮಿತಿಯ ಶ್ರೀಶ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕ ಶ್ರೀ ಶಾರದೋತ್ಸವ ಪೋಸ್ಟರ್ ಅನ್ನು ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ಮಂಗಳವಾರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಶಾರದೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ, ಕಾರ್ಯದರ್ಶಿ ದಿನಕರ ಪಾಂಡೇಶ್ವರ, ಕೋಶಾಧಿಕಾರಿ ವಿಶ್ವನಾಥ್ ಆಚಾರ್ಯ ಇದ್ದರು.
Leave a Reply