
ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ವ್ಯಕ್ತಿಯೋರ್ವರನ್ನು ಕಿಡ್ನಾಪ್ ಮಾಡಿ ಮಹಿಳೆ ಸಹಿತ ಆರು ಮಂದಿ ಸೇರಿ ಬ್ಲಾಕ್ ಮೇಲ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಸವದ್ ಯಾನೆ ಅಚ್ಚು, ಸೈಪುಲ್ಲಾ,ಮೊಹಮ್ಮದ್ ನಾಸೀರ್ ಶರೀಫ್, ಅಬ್ದುಲ್ ಸತ್ತಾರ್, ಅಬ್ದುಲ್ ಅಜೀಜ್, ಆಸ್ಮಾ ಎಂದು ಗುರುತಿಸಲಾಗಿದೆ. ಆರೋಪಿಗಳು ಸಂದೀಪ್ ಕುಮಾರ್ ನನ್ನು ಹಣಕ್ಕಾಗಿ ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾಗಿದೆ.
ಬಂಧಿತ ಆರೋಪಿಗಳನ್ನು ಕುಂದಾಪುರ ಪೊಲೀಸರು ವಿಚಾರಣೆ ನಡೆಸಿ, ಬಂಧಿತರಿಂದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ : ಪಿರ್ಯಾಧಿದಾರರಾದ ಸಂದೀಪ ಕುಮಾರ್ ಎಂಬುವರಿಗೆ ಸುಮಾರು 3 ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಆರೋಪಿ ಅಬ್ದುಲ್ ಸವಾದ್ ಎಂಬುವರ ಪರಿಚಯವಾಗಿದ್ದು, ಆತನ ಮೊಬೈಲ್ ಗೆ ಕರೆ ಮಾಡಿ ಮಾತನಾಡುತ್ತಿದ್ದು, ಅಲ್ಲದೇ ಆತನ ಸ್ನೇಹಿತರಾದ ಉಳಿದ ಆರೋಪಿತರು ಕೂಡ ಪರಿಚಯವಾಗುತ್ತದೆ. ಆರೋಪಿ ಸವದ್, ಅರೋಪಿ ಆಸ್ಮಾ ಇವರನ್ನು ಪರಿಚಯ ಮಾಡಿಕೊಟ್ಟು ಅವರ ಮೊಬೈಲ್ ನಂಬ್ರ ಕೊಟ್ಟಿದ್ದು, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ತಿಳಿದು ಅವರಿಗೆ ಕರೆ ಮಾಡಿದಾಗ ಆರೋಪಿ ಆಸ್ಮಾ ಪಿರ್ಯಾದಿದಾರರನ್ನು ಕುಂದಾಪುರಕ್ಕೆ ಬರಲು ತಿಳಿಸಿದಂತೆ ಪಿರ್ಯಾದಿದಾರರರು ದಿನಾಂಕ 02-09-2025 ರಂದು ಸಂಜೆ 6:30 ಗಂಟೆಗೆ ಕುಂದಾಪುರದ ಮಲ್ನಾಡ್ ಪೆಟ್ರೋಲ್ ಬಂಕ್ ಬಳಿ ಇರುವ ಆರ್ ಆರ್ ಪ್ಲಾಝಾ ಬಳಿ ಆಟೋ ರಿಕ್ಷಾದಲ್ಲಿ ಬಂದಾಗ ಆರೋಪಿ ಆಸ್ಮಾ ಈಕೆಯು ಅವರ ಮನೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಆರೋಪಿತ ಆಸ್ಮಾ ಉಳಿದ ಆರೋಪಿತರನ್ನು ಕರೆ ಮಾಡಿ ಕರೆಯಿಸಿ ಪಿರ್ಯಾದಿದಾರರ ಬಳಿ 3 ಲಕ್ಷ ಹಣ ಕೊಟ್ಟು ಹೋಗಬೇಕು ಎಂದು ಆರೋಪಿತ ಮೊಹಮ್ಮದ್ ನಾಸೀರ್ ಶರೀಫ್ ಈತನು ಚಾಕು ತೋರಿಸಿ ಹಣ ಕೊಡುವಂತೆ ಹೆದರಿಸಿರುತ್ತಾರೆ.
ಆ ಸಮಯದಲ್ಲಿ ಪಿರ್ಯಾದಿದಾರರು ಹೆದರಿ ಓಡಿ ಹೋಗಲು ಪ್ರಯತ್ನಿಸಿದಾಗ ಆರೋಪಿತರಾದ ಸವದ್ ಯಾನೆ ಅಚ್ಚು, ಸೈಪುಲ್ಲಾ, ಮೊಹಮ್ಮದ್ ನಾಸೀರ್ ಶರೀಫ್ , ಅಬ್ದುಲ್ ಸತ್ತಾರ್ ಮತ್ತು ಅಬ್ದುಲ್ ಅಜೀಜ್ ಇವರುಗಳು ಸೇರಿ ಕೈಗಳಿಗೆ ನೈಲಾನ್ ಹಗ್ಗದಿಂದ ಕಟ್ಟಿ ಕೈಯಿಂದ ಹಲ್ಲೆ ಮಾಡಿದ್ದು, ಆರೋಪಿ ಸೈಪುಲ್ಲಾ ಈತನು ಪಿರ್ಯಾದಿದಾರರಿಗೆ ರಾಡ್ ನಿಂದ ಎಡ ಭುಜ ಹಾಗೂ ಬೆನ್ನಿಗೆ ಹೊಡೆದು ಬಳಿಕ ಪಿರ್ಯಾದಿದಾರರ ಪ್ಯಾಂಟ್ ಜೇಬಿನಲ್ಲಿದ್ದ 6,200 ರೂಪಾಯಿನ್ನು ಆರೋಪಿ ಸೈಪುಲ್ಲಾ ಮತ್ತು ಆಸ್ಮಾ ಇವರು ಸೇರಿ ಬಲವಂತದಿಂದ ಕಸಿದು ಕೊಂಡಿರುತ್ತಾರೆ. ನಂತರ ಆಸ್ಮಾಳು ಪಿರ್ಯಾದಿದಾರರಿಗೆ ಗೂಗಲ್ ಪೇ ಮೂಲಕ ಹಣ ಹಾಕಲು ಒತ್ತಾಯಿಸಿದಾಗ ಪಿರ್ಯಾದಿದಾರರು ಅವರ ಎಸ್.ಬಿ.ಐ ಬ್ಯಾಂಕ್ ಖಾತೆಯ ಗೂಗಲ್ ಪೇ ಮೂಲಕ ಆರೋಪಿ ಸೈಪುಲ್ಲಾನ ಮೊಬೈಲ್ ಸಂಖ್ಯೆಗೆ 5.000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಬಳಿಕ ಆರೋಪಿತರು ಇನ್ನೂ ಹಣವನ್ನು ಹಾಕುವಂತೆ ಪಿರ್ಯಾದಿದಾರರಿಗೆ ಹೇಳಿದಾಗ ಪಿರ್ಯಾದಿದಾರರು ಹಣ ಇಲ್ಲ ಎಂದು ಹೇಳಿದಕ್ಕೆ ಆರೋಪಿತರೆಲ್ಲರು ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಹುಗಿದು ಹಾಕುತ್ತೇವೆಂದು” ಬೆದರಿಸಿ ಪುನಃ ಕೈಯಿಂದ ಹೊಡೆದಿರುತ್ತಾರೆ. ಇದಕ್ಕೆ ಹೆದರಿದ ಪಿರ್ಯಾದಿದಾರರು ಸೈಪುಲ್ಲಾ ಎಂಬವರ ಮೊಬೈಲ್ ನಂಬರ್ ಕ್ಕೆ ಒಮ್ಮೆ 10.000/- ಮತ್ತು 20.000/- ರೂಪಾಯಿ ವರ್ಗಾವಣೆ ಮಾಡಿರುತ್ತಾರೆ.
ನಂತರ ಪುನಃ ಬಲತ್ಕಾರವಾಗಿ ಎಟಿಎಂ ಕಾರ್ಡ್ ನ್ನು ಕಿತ್ತುಕೊಂಡು ಪಿನ್ ನಂಬ್ರ ಪಡೆದುಕೊಂಡು ಆರೋಪಿ ಆಸ್ಮಾ ಇವಳ ಮನೆಯ ರೂಮಿನಲ್ಲಿ ಕೂಡಿಹಾಕಿ ಆರೋಪಿ ಸೈಪುಲ್ಲಾ, ಮೊಹಮ್ಮದ್ ನಾಸೀರ್ ಶರೀಫ್ ಮತ್ತು ಅಬ್ದುಲ್ ಸತ್ತಾರ್ ಅಲ್ಲಿಯೇ ಇದ್ದು, ಪಿರ್ಯಾದಿದಾರರ ಎಸ್ ಬಿ ಐ ಖಾತೆಯಿಂದ 40000/- ಹಣ ಡ್ರಾ ಮಾಡಿಕೊಂಡು, ATM ಕಾರ್ಡ್ ಮತ್ತು ಹಣವನ್ನು ಇಟ್ಟುಕೊಂಡಿರುತ್ತಾರೆ. ಪಿರ್ಯಾದಿದಾರರನ್ನು ರಾತ್ರಿ ಸುಮಾರು 11:30 ಗಂಟೆಗೆ ಹೋಗು ಎಂದು ಹೇಳಿ ಬೆದರಿಸಿ ಕಳುಹಿಸಿರುತ್ತಾರೆ.
ಸವದ್ ಯಾನೆ ಅಚ್ಚು ಪ್ರಾಯ 28 ವರ್ಷ ತಂದೆ: ಅಬ್ದುಲ್ ರಜಾಕ್ ವಾಸ: ಮನೆ ನಂಬ್ರ 2/55(A) ಕಟ್ಟೆಬಾಗಿಲು ಬಡಾಕೆರೆ ಪಡುಮುಂದೆ ಬಡಾಕೆರೆ ಅಂಚೆ ನಾವುಂದ ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ ಸೈಪುಲ್ಲಾ ಪ್ರಾಯ: 38 ವರ್ಷ ತಂದೆ:ಇಬ್ರಾಹೀಂ ಸಾಹೇಬ್ ವಾಸ:3-59/1 ಆಯಿಷಾ ಮಂಜಿಲ್ ಗಾಂಧೀ ಕಟ್ಟೆ (ಬೋಳಕಟ್ಟೆ ) ಗುಲ್ವಾಡಿ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ
ಮೊಹಮ್ಮದ್ ನಾಸೀರ್ ಶರೀಫ್ ಪ್ರಾಯ 36 ವರ್ಷ ತಂದೆ: ಅಬ್ದುಲ್ ಅಜೀಜ್ ಶರೀಫ್ ವಾಸ: ಜೂಲಿಯೋ ರೆಸಿಡೆನ್ಸಿ, ರೂಮ್ ನಂಬ್ರ 108, ಹಂಗಳೂರು ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಅಬ್ದುಲ್ ಸತ್ತಾರ್ ಪ್ರಾಯ 23 ವರ್ಷ ತಂದೆ: ಇಬ್ರಾಹಿಂ ವಾಸ: ಮನೆ ನಂಬ್ರ 1-493(2) ಜನತಾ ಕಾಲೋನಿ ಮೂಡುಗೋಪಾಡಿ, ಕುಂಭಾಶಿ ಗ್ರಾಮ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಅಬ್ದುಲ್ ಅಜೀಜ್ ಪ್ರಾಯ 26 ವರ್ಷ ತಂದೆ: ಸುಲೈಮಾನ್ ಸಾಹೇಬ್ ವಾಸ: ಮನೆ ನಂಬ್ರ 10/2 ಕೊಲ್ಲುರು ಮುಖ್ಯ ರಸ್ತೆ ಬಲಕಡೆ ಹೊಲಗಾರು ಸರಕಾರಿ ಶಾಲೆ ಹತ್ತಿರ ನಾಗೋಡಿ ಅಂಚೆ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ ಆಸ್ಮಾ ಪ್ರಾಯ 43 ವರ್ಷ ಗಂಡ: ಅಬೂಬಕ್ಕರ್ ತಂದೆ: ಹೆಚ್. ಮೊಹಮ್ಮದ್ ವಾಸ: T-17 ಮಿಸ್ಪಾ ಮಂಜಿಲ್, ಎಂ ಕೋಡಿ, ಕುಂದಾಪುರ ತಾಲೂಕು ಮತ್ತು ಉಡುಪಿ ಜಿಲ್ಲೆ ಹಾಲಿ ವಾಸ: ರಾಯಲ್ ಎನ್ ಪೀಲ್ಡರೂಂ ಹಿಂದುಗಡೆ ಗೋಪಾಡಿ ಗ್ರಾಮ ಕುಂದಾಪುರ ತಾಲೂಕು ಮತ್ತು ಉಡುಪಿ ಜಿಲ್ಲೆ ಇವರನ್ನು ದಸ್ತಗಿರಿ ಮಾಡಲಾಗಿದ್ದು, ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನಗಳಾದ 1) KA 20 MD 7072 ಕಾರು ಅಂದಾಜು ಮೌಲ್ಯ ರೂ 10,00,000/- 2) KA 20 ME 0272 ಕಾರು ಅಂದಾಜು ಮೌಲ್ಯ ರೂ 08,00,000/- ಅನ್ನು ವಶ ಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಸಂದೀಪ್ ಕುಮಾರ ರವರು ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 109/2025 ಕಲಂ:140(2) 310(2) 115(2) 118(1) 127(2) 352 351(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ತನಿಖೆಯ ಸಂಬಂಧ ಉಡುಪಿ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ ಐಪಿಎಸ್ ರವರ ಆದೇಶದಂತೆ ಸುಧಾಕರ ನಾಯ್ಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಂತೆ ಹೆಚ್ ಡಿ ಕುಲಕರ್ಣಿ, ಪೋಲೀಸ್ ಉಪಾಧೀಕ್ಷಕರು ಕುಂದಾಪುರ ರವರ ರವರ ನಿರ್ದೇಶನದಂತೆ ಠಾಣಾ ಪಿ.ಎಸ್.ಐ ರವರಾದ ನಂಜಾನಾಯ್ಕ್ ಎನ್ (ಕಾ&ಸು) , ಪಿ.ಎಸ್.ಐ ಶ್ರೀಮತಿ ಪುಷ್ಪ (ತನಿಖೆ) ಹಾಗೂ ಸಿಬ್ಬಂದಿಗಳಾದ ಪ್ರೀನ್ಸ್, ಘನಶ್ಯಾಮ್, ಚಾಲಕರಾದ ರಾಜು, ನಾಗೇಶ, ಮಹಾಬಲ, ರಾಘವೇಂದ್ರ,ಗೌತಮ್, ಭಾಗಿರತಿ ನಾಗಶ್ರೀ ಮತ್ತು ರೇವತಿ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ. ಆರೋಪಿತರನ್ನು ಕೋಟೇಶ್ವರ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿದ ಸಮಯದಲ್ಲಿ ಸುಲಿಗೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ.
Leave a Reply