
ಕೋಟ: ಸರಕಾರಿ ಪ್ರೌಢಶಾಲೆ ಗುಂಡ್ಮಿ ಇಲ್ಲಿ ಜೆಸಿಐ ಇದರ ಸೀನಿಯರ್ ಚೇಂಬರ್ ಸಾಸ್ತಾನ ಘಟಕದ ವತಿಯಿಂದ ಮನೋಜ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮ ಜರಗಿತು.
ಸೀನಿಯರ್ ಚೇಂಬರ್ ಸಾಸ್ತಾನ ಘಟಕದ ಅಧ್ಯಕ್ಷ ಮನೋಜ್ ಕುಮಾರ್, ಸೀನಿಯರ್ ಚೇಂಬರ್ಸ್ ಇಂಟರ್ನಾ್ಯಷನಲ್ ಎಸ್ಸಿಐ ಇದರ ಪ್ರಮುಖರಾದ ಬಾಲಕೃಷ್ಣ ಪೂಜಾರಿ, ಅರವಿಂದ್ ಶರ್ಮ, ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಸುಜಾತ, ಗಣೇಶ್ ಜಿ , ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಐತಾಳ್, ಬ್ರಹ್ಮಾವರ ತಾಲೂಕು ಸಮನ್ವಯ ಸಮಿತಿಯ ಸದಸ್ಯ ಕಾಪು ಅಶ್ಪಕ್, ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರವೀಂದ್ರ ಕಾಮತ್ ಇದ್ದರು.
Leave a Reply