Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಾಬುಕಳ –  ಕ್ರೀಡಾ ಕ್ಷೇತ್ರದಲ್ಲಿ ಸಚಿನ್, ಕುಂಬ್ಳೆಯಂತೆ  ಪ್ರಸಿದ್ಧಿ ಪಡೆಯಿರಿ ಕ್ರಿಕ್ರೆಟ್ ಪಟುಗಳಿಗೆ  ಹರೀಷ್ ಕುಮಾರ್ ಮಧ್ಯಸ್ಥ ಸಲಹೆ

ಕೋಟ: ಕ್ರೀಡಾ ಕ್ಷೇತ್ರದಲ್ಲಿ ಪ್ರತಿಯೊಬ್ಬರು ಸಾಧನೆಯ ಪಥದೊಂದಿಗೆ ಸಚಿನ್ ,ಕುಂಬ್ಳೆ ರೀತಿಯಲ್ಲಿ ಪ್ರಸಿದ್ಧಿ ಪಡೆಯಿರಿ ಎಂದು  ಜಪಾನ್ ಮಿಯಾಜಾಕಿ ವಿಶ್ವವಿದ್ಯಾಲಯ ಪ್ರೊಫೆಸರ್  ಹರೀಶ್ ಕುಮಾರ್ ಮಧ್ಯಸ್ಥ ಕ್ರೀಡಾರ್ಥಿಗಳಿಗೆ  ಕರೆ ನೀಡಿದರು.

ಗುರುವಾರ ಚೇತನಾ ಪ್ರೌಢ ಶಾಲಾ ಬಿ.ಡಿ ಶೆಟ್ಟಿ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬ್ರಹ್ಮಾವರ,ಚೇತನಾ ಪ್ರೌಢಶಾಲೆ ಹಂಗಾರಕಟ್ಟೆ ಇಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಕೂಟದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿ ಕ್ರೀಡಾ ಕ್ಷೇತ್ರ ಶೈಕ್ಷಣಿಕ ಸಾಧಕರೇ ಕ್ರೀಡಾಪಟುಗಳಾಗಬೇಕೆಂದಿಲ ಬದಲಾಗಿ ಸಾಧನೆ ತೊರುವ ಛಲ ಇದ್ದರೆ ಸಾಧಕನಾಗಿ ಹೊರ ಹೊಮ್ಮಲು ಸಾಧ್ಯ, ಪ್ರಸ್ತುತ ಕ್ರಿಕೆಟ್ ವಿಶ್ವಮಟ್ಟದ ಕ್ರೀಡೆಯಾಗಿ ಗುರುತಿಸಿಕೊಂಡಿದೆ.ಕ್ರಿಕೆಟ್ ಅಕಾಡೆಮಿ ಮೂಲಕ ಹೊಸ ಹೊಸ ಅವಿಷ್ಕಾರಗಳು ಕ್ರೀಡಾ ಜಗತ್ತನಲ್ಲಿ ಸಂಚಲನ ಮೂಡಿಸಿದೆ ಇದಕ್ಕೆ ಟಿ.20 ಕ್ರಿಕೆಟ್ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮವನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್ ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್, ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಚೇರ್‌ಮ್ಯಾನ್ ತಾರನಾಥ ಶೆಟ್ಟಿ, ಐರೋಡಿ ಪಂಚಾಯತ್ ಉಪಾಧ್ಯಕ್ಷೆ ಗೀತಾ ಶೆಟ್ಟಿ, ರೋಟರಿ ಕ್ಲಬ್ ಹಂಗಾರಕಟ್ಟೆ-ಸಾಸ್ತಾನ   ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್,ಶಾಲಾ ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ವಿಘ್ನೇಶ್ವರ ಅಡಿಗ, ಉಡುಪಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಕರ ಸಂಘ ಬ್ರಹ್ಮಾವರ ತಾಲೂಕು ಗ್ರೇಡ್ 1ರ ಅಧ್ಯಕ್ಷ ಚಂದ್ರಶೇಖರ್,ದೈಹಿಕ ಶಿಕ್ಷಕರ ಸಂಘದ ಗ್ರೇಡ್ 2 ಇದರ ಅಧ್ಯಕ್ಷ ಶ್ರೀಕಾಂತ್ ಸಾವಂತ್ ಉಪಸ್ಥಿತರಿದ್ದರು.ಬ್ರಹ್ಮಾವರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಪ್ರಾಸ್ತಾವನೆ ಸಲ್ಲಿಸಿದರು. ಶಾಲಾಮುಖ್ಯ ಶಿಕ್ಷಕಿ  ಕಲ್ಪನಾ ಶೆಟ್ಟಿ ಸ್ವಾಗತಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಹರ್ಷವರ್ಧನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಗುರುವಾರ ಚೇತನಾ ಪ್ರೌಢ ಶಾಲಾ ಬಿ.ಡಿ ಶೆಟ್ಟಿ ಕ್ರೀಡಾಂಗಣದಲ್ಲಿ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬ್ರಹ್ಮಾವರ, ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜುಂ ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಎಚ್. ಇಬ್ರಾಹಿಂ ಸಾಹೇಬ್, ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಚೇರ್‌ಮ್ಯಾನ್ ತಾರನಾಥ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *