
ಶಿಕ್ಷಕರ ದಿನಾಚರಣೆ ಪ್ರಯುಕ್ತ ಕುಂಭಾಶಿ ಗ್ರಾಮದ ಕೊರವಡಿ ಶಾಲೆಯ ಅಂಗನವಾಡಿ ಶಿಕ್ಷಕಿ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಶ್ರೀಮತಿ ಶೋಭಾ ಮೊಗವೀರ ಇವರನ್ನು ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕೊಟೇಶ್ವರ ಘಟಕದ ವತಿಯಿಂದ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕೋಟೇಶ್ವರ ಘಟಕದ ಅಧ್ಯಕ್ಷರಾದ ರಾಘವೇಂದ್ರ ಹರಪನ ಕೆರೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಂಘಟನೆಯ ಉಪಾಧ್ಯಕ್ಷರದ ರವೀಶ್ ಎಸ್. ಕೊರವಡಿಯವರು ಪ್ರಾಸ್ತಾವಿಕ ಮಾತನಾಡಿ, ಸತೀಶ್ ಎಂ. ನಾಯ್ಕ್ ಶಿಕ್ಷಕರ ದಿನಾಚರಣೆ ಮಹಾತ್ವದ ಬಗ್ಗೆ ತಿಳಿಸಿದರು. ಕೋಟೇಶ್ವರ ಘಟಕದ ಗೌರವ ಅಧ್ಯಕ್ಷಾದ ಆನಂದ್ ಕುಂದರ್ ಅಜ್ಜರಬೆಟ್ಟು ಮಾಜಿ ಗೌರವ ಅಧ್ಯಕ್ಷರಾದ ಜಗದೀಶ್ ಮೊಗವೀರ ಮಾರ್ಕೊಡು, ಸುರೇಶ್ ಮೊಗವೀರ ಶಾನಾಡಿ, ಮಾಜಿ ಅಧ್ಯಕ್ಷರಾದ ಸುನಿಲ್ ಜಿ. ನಾಯ್ಕ್ ನಾಗರಾಜ್ ಬೀಜಾಡಿ ಹಾಗೂ ಗುರಿಕಾರರಾದ ರಾಮ ನಾಯ್ಕ್ ಬೀಜಾಡಿ, ಶೇಖರ್ ಇಂಬಾಳಿ, ರಾಜು ಗುರಿಕಾರ ಹಳಅಳಿವೆ ಗೋಪಾಲ ಮೆಂಡನ್ ಪಡಾಯಿನ್ ಮನೆ, ಮತ್ತು ಕೊಮೆ ಕೊರವಾಡಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಕೊರವಡಿ, ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು ಘಟಕದ ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Leave a Reply