Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತೋತ್ಸವ, ನಾರಾಯಣ ಗುರುಗಳ ಆದರ್ಶ ಅನುಸರಿಸಿ -ಜಿ.ಸದಾನಂದ ಗಿಳಿಯಾರು

ಕೋಟ: ಬ್ರಹ್ಮಶ್ರೀ ನಾರಾಯಣಗುರು ಇಡೀ ವಿಶ್ವಕ್ಕೆ ಸಾಮರಸ್ಯ ಸಾರಿದ ಮಹಾನ್‌ಮಾನವತವಾದಿಯಾಗಿ ಅಸ್ಪಶ್ಯತೆಯ ವಿರುದ್ಧ ಸಮರ ಸಾರಿ ಮನುಕುಲದ ಒಳಿತಿಗೆ ಶ್ರಮಿಸಿದ್ದಾರೆ ಎಂದು ಕೋಟದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಜಿ.ಸದಾನಂದ ಗಿಳಿಯಾರು ಹೇಳಿದರು.

ಕೋಟದ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬ್ರಹ್ಮ ಶ್ರೀನಾರಾಯಣ ಗುರುಗಳ 171ನೇ ಜಯಂತೋತ್ಸವ ಅಂಗವಾಗಿ ಹಮ್ಮಿಕೊಂಡ ಗುರುಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜ ಸುಧಾರಣೆಯಲ್ಲಿ ಐಕ್ಯತೆಯನ್ನು ಪಸರಿಸಿದ ನಾರಾಯಣಗುರುಗಳು ಕೆಳ ವರ್ಗದವರ ಪಾಲಿನ ಆಶಾಕಿರಣವಾಗಿದರು ಆಗಿನ ಕಾಲದ ಆ ಹೋರಾಟ ತಳಹದಿ ವ್ಯವಸ್ಥೆಯನ್ನು ಗಟ್ಟಿಗೊಳಿಸಿದೆ ಎಂದರು.

ಗುರು ಪೂಜೆಯ ಅಂಗವಾಗಿ ಹಮ್ಮಕೊಂಡ ಗುರುಪೂಜಾ ಕಾರ್ಯಕ್ರಮವನ್ನು ಹೆಜಮಾಡಿ ಮಹೇಶ್ ಶಾಂತಿ ಮಾರ್ಗದರ್ಶನದಲ್ಲಿ ಸುರೇಶ್ ಶಾಂತಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೆರಿಸಿದರು.ಧಾರ್ಮಿಕಾರ್ಯದಲ್ಲಿ ಗುರುಮಂದಿರದ ಅರ್ಚಕರಾದ ಮನೋಹರ್ ಪೂಜಾರಿ, ಸಂತೋಷ್ ಪೂಜಾರಿ ಸಹಕರಿಸಿದರು. ಕೋಟದ ಪಡುಕರೆ ರಾಮಾಮೃತ ಭಜನಾ ತಂಡದಿoದ ಭಜನಾ ಕಾರ್ಯಕ್ರಮ ಜರಗಿತು.

ಸಂಘದ ಪ್ರಧಾನಕಾರ್ಯದರ್ಶಿ ಪ್ರಸಾದ್ ಬಿಲ್ಲವ, ಸಂಘದ ಪ್ರಮುಖರಾದ ರಾಜು ಪೂಜಾರಿ ಹೋಬಳಿ ಮನೆ, ರಾಜು ಪೂಜಾರಿ ಪಡುಕರೆ, ಪುಟ್ಟಣ ಪೂಜಾರಿ, ಸುಧಾ ಎ ಪೂಜಾರಿ, ಗುಲಾಬಿ ಪೂಜಾರಿ, ಕೃಷ್ಣ ಪೂಜಾರಿ ಪಿ, ರಾಜು ಪೂಜಾರಿ ಕದ್ರಿಕಟ್ಟು, ಸುರೇಶ್ ಗಿಳಿಯಾರು, ಸುರೇಶ್ ಗೊಬ್ಬರಬೆಟ್ಟು, ಉಮೇಶ್ ಪೂಜಾರಿ, ರತ್ನಾಕರ ಪೂಜಾರಿ, ಆನಂದ ಪೂಜಾರಿ ಇದ್ದರು. ಈ ಅಂಗವಾಗಿ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು.

ಕೋಟದ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬ್ರಹ್ಮ ಶ್ರೀನಾರಾಯಣ ಗುರುಗಳ 171ನೇ ಜಯಂತೋತ್ಸವ ಅಂಗವಾಗಿ ಹಮ್ಮಿಕೊಂಡ ಗುರುಪೂಜಾ ಕಾರ್ಯಕ್ರಮ ಜರಗಿತು. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಜಿ.ಸದಾನಂದ ಗಿಳಿಯಾರು, ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಿಲ್ಲವ,ಸಂಘದ ಪ್ರಮುಖರಾದ ರಾಜು ಪೂಜಾರಿ ಹೋಬಳಿ ಮನೆ,ರಾಜು ಪೂಜಾರಿ ಪಡುಕರೆ, ಪುಟ್ಟಣ ಪೂಜಾರಿ, ಸುಧಾ ಎ ಪೂಜಾರಿ, ಗುಲಾಬಿ ಪೂಜಾರಿ ಇದ್ದರು.

Leave a Reply

Your email address will not be published. Required fields are marked *