
ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಹೋಬಳಿಯ ಅಡಿಹುಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಡಿಹುಡಿಯ ಸಹ ಶಿಕ್ಷಕರಾದ ಜಿ. ಎಸ್ ಗಳವೆ ಅವರಿಗೆ ಇತ್ತೀಚೆಗೆ ಕಲಾಭವನದಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಬಾಗಲಕೋಟೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇವರ ಶ್ರೇಷ್ಠ ಶೈಕ್ಷಣಿಕ ಸೇವೆಯನ್ನು ಗುರುತಿಸಿ 2025ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಸಹ ಶಿಕ್ಷಕರಾಗಿ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು, ವಿದ್ಯಾರ್ಥಿಗಳಿಗೆ ಉತ್ತಮ ಬೋಧಕರಾಗಿದ್ದಾರೆ, ಹಲವಾರು ತರಬೇತಿಗಳಲ್ಲಿ ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ಸಾವಳಗಿ ವಲಯದ ಸಿ. ಆರ್. ಪಿಯಾಗಿ ಸೇವೆ ಕಾರ್ಯನಿರ್ವಹಿಸಿದ್ದಾರೆ, ಇವರ ಅವಧಿಯಲ್ಲಿ ನವಿಕೃತಗೊಂಡ ಸಂಪನ್ಮೂಲವನ್ನು ಆಗಿನ ಶಿಕ್ಷಣ ಸಚಿವರಿಂದ ಉದ್ಘಾಟನೆಗೊಳ್ಳಿಸಿದ್ದಾರೆ, ಹೀಗೆ ಸೇರಿದಂತೆ ಅನೇಕ ಸೇವೆಗಳನ್ನು ಕೈಗೊಂಡಿದ್ದಾರೆ ಇದರಿಂದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.
Leave a Reply