Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

171 ನೇ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ – ಕೊಡವೂರು

ಕೊಡುವೂರು ವಾರ್ಡಿನಲ್ಲಿ 171ನೇ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಲಕ್ಷ್ಮೀ  ನಗರ ಗರ್ಡೇ ಪರಿಸರದ ಕೃಷ್ಣಪ್ಪ ಕಾಂಪ್ಲೆಕ್ಸ್ ನಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣ ಗುರು ಆಚರಣೆಯಲ್ಲಿ ಪ್ರಯುಕ್ತ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಡವೂರು, ಗೆಳೆಯರ ಬಳಗ ಗರ್ಡೇ ಲಕ್ಷ್ಮೀನಗರ, ರೋಟರಿ ಕ್ಲಬ್ ಕಲ್ಯಾಣ್ ಪುರ, ಎಂ ಸಿ ಕೆ ಎಸ್ ಫುಡ್ ಫಾರ್ ಹಂಗ್ರಿ ಫೌಂಡೇಶನ್ ಕರ್ನಾಟಕ, ಮಾತೃಶ್ರೀ ಮಹಿಳಾ ಮಂಡಳಿ ಲಕ್ಷ್ಮೀ ನಗರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಸರ್ವೇಕ್ಷಣ ಘಟಕ ವಿಭಾಗ ಉಡುಪಿ, ನಮ್ಮ ಕ್ಲಿನಿಕ್ ಕೊಡವೂರು ಆಶಯದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ಕ್ಷಯ ಮುಕ್ತ ಉಡುಪಿಗಾಗಿ ಕ್ಷಯ ರೋಗಸ್ತರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದಂತಹ ನಗರಸಭಾ ಸದಸ್ಯರಾದ ಕೆ ವಿಜಯ ಕೊಡವೂರು ಎಲ್ಲಾ ಸಂಘ ಸಂಸ್ಥೆಗಳನ್ನು ಒಟ್ಟು ಮಾಡಿ ಇಂತಹ ಕಾರ್ಯಕ್ರಮ ಮಾಡುವುದರಿಂದ ಸಂಸ್ಥೆಗಳಿಗೆ ಊರಿನ ಜವಾಬ್ದಾರಿ ಹೆಚ್ಚುತ್ತದೆ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಅದೇ ರೀತಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ಸಮಾಜಕ್ಕೋಸ್ಕರ ನಮ್ಮ ಜೀವ ಮತ್ತು ಜೀವನವನ್ನು ನೀಡಿದ್ದಾರೆ.

ಇವರು ಹಿಂದು ಧರ್ಮ ರಕ್ಷಕರು ಹೌದು ಜಾತಿ ತಾರತಮ್ಯ ಇದ್ದಾಗ ಹಿಂದೂ ಧರ್ಮದ ಅನೇಕ ಅಂಕುಡೊಂಕುಗಳನ್ನು ಸರಿ ಮಾಡುವುದರ ಮುಖಾಂತರ ಸ್ವಸ್ಥ ಸಮಾಜ ನಿರ್ಮಾಣ ಮಾಡಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗದೆ. ಇಡೀ ದೇಶದ ಎಲ್ಲಾ ನಾಗರಿಕರು ಮತ್ತು ಮುಂದಿನ ಪೀಳಿಗೆಯ ಮಕ್ಕಳು ಮತ್ತು ನಾರಾಯಣ ಗುರುಗಳ ಆದರ್ಶ ಮತ್ತು ನಾರಾಯಣ ಗುರುಗಳ ಹೆಜ್ಜೆಯ ಗುರುತಿನಲ್ಲಿ ನಡೆಯುವ ಅವಶ್ಯಕತೆ ಇದೆ ಎಂದು ನಗರಸಭಾ ಸದಸ್ಯರಾದ ಕೆ ವಿಜಯ ಕೊಡವೂರು ತಿಳಿಸಿದರು.

ಈ ಸಂದರ್ಭದಲ್ಲಿ  ಡಾ ಶ್ರಮ್ಯ ಶೆಟ್ಟಿ ಜಿಲ್ಲಾ ಆಸ್ಪತ್ರೆ ಉಡುಪಿ,ಡಾ ಪ್ರತೀಕ ನಮ್ಮ ಕ್ಲಿನಿಕ್ ಮಲ್ಪೆ,  ಡಾ ಪ್ರಭು ನಮ್ಮ ಕ್ಲಿನಿಕ್ ಕಂಕ್ಕುಂಜೆ, ಮನು ಗಂಜೀನಹಳ್ಳಿ ಆಪ್ತಸಮಲೋಚಕರು ಜಿಲ್ಲಾ ಆಸ್ಪತ್ರೆ ಉಡುಪಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಡವೂರು ಇದರ ಸದಸ್ಯರು, ಗೆಳೆಯರ ಬಳಗ ಲಕ್ಷ್ಮಿನಗರ ಸದಸ್ಯರು, ಮಾತೃಶ್ರೀ ಮಂಡಳಿ ಲಕ್ಷ್ಮೀ ನಗರ ಸದಸ್ಯರು, ರೋಟರಿ ಕ್ಲಬ್ ಕಲ್ಯಾಣ್ ಪುರ ಅಧ್ಯಕ್ಷರು, ಎಂಸಿ ಕೆ ಎಸ್ ಪುಟ್ ಫಾರ್ ಹಂಗ್ರಿ ಫೌಂಡೇಶನ್ ಪ್ರಮುಖರು, ಸಮಾಜ ಸೇವಕರಾದ ಅಖಿಲೇಶ್ ಎ ಉಜಿರೆ, ಊರಿನ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *