
ಕೊಡವೂರು ವಾರ್ಡಿನ ಕೊಡವೂರು ಭಾಗದ ಲಕ್ಷ್ಮೀ ನಗರ ಪೇಟೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿಯ ನಿಮಿತ್ತ “ಬ್ರಹ್ಮ ಶ್ರೀ ನಾರಾಯಣ ಗುರು ಬಸ್ಸು ತಂಗುದಾಣ ಉದ್ಘಾಟನೆಯಾಯಿತು.
ಈ ಉದ್ಘಾಟನೆಯನ್ನು ಉದ್ದೇಶಿಸಿ ಅಲ್ಲಿಯ ನಗರಸಭಾ ಸದಸ್ಯರು ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದರೆ ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗಿರುವಂತ ವ್ಯಕ್ತಿಯಲ್ಲ. ನಾರಾಯಣ ಗುರುಗಳು ಪವಿತ್ರವಾಗಿರುವಂತಹ ಹಿಂದೂ ಧರ್ಮದ ಮತ್ತಷ್ಟು ಜನ ಮತಾಂತರವಾಗಿ ಧರ್ಮ ಬಿಟ್ಟು ಹೋಗುವ ಸಂಗತಿ ಇದ್ದಾಗ ಅವರನ್ನು ಮನವೊಲಿಸಿ, ಧರ್ಮದ ವಿಶೇಷತೆ ಮತ್ತು ಪಾವಿತ್ರತೆಯನ್ನು ತಿಳಿಸಿ ಹಿಂದೂ ಧರ್ಮದಲ್ಲಿ ಉಳಿಯುವಂತೆ ಮಾಡಿದ ಒಬ್ಬ ಸಂತರು. ಮೇಲು ಕೇಳು ಜಾತಿ ಎನ್ನುವ ವಾತಾವರಣದಲ್ಲಿ ಎಲ್ಲರೂ ಒಂದೇ ಜಾತಿ ಒಂದೇ ದೇವರನ್ನು ಪೂಜೆ ಮಾಡಬೇಕು ಒಟ್ಟಾಗಿ ಬದುಕಬೇಕು ಅನ್ನುವ ಒಳ್ಳೆಯ ಸಂದೇಶ ನೀಡಿ ನಮ್ಮ ಹಿಂದುತ್ವವನ್ನು ರಕ್ಷಣೆ ಮಾಡಿರುವ ಒಬ್ಬ ಮಹಾನ್ ಸಂತ ಮುಂದಿನ ಪೀಳಿಗೆ ಎಲ್ಲಾ ಮನೆಯಲ್ಲಿ ನಾರಾಯಣ ಗುರುಗಳ ಪುಸ್ತಕವನ್ನು ಓದಿ ಅಧ್ಯಯನ ಮಾಡಿ ಅವರ ಜೀವನದ ಹೆಜ್ಜೆ ಗುರುತುಗಳಲ್ಲಿ ನಡೆಯುವ ಅವಶ್ಯಕತೆ ಇದೆ. ನಾವು ಒಂದೊಂದು ಸಮಾಜಕ್ಕೆ ಒಂದೊಂದು ಧ್ವಜ ಇನ್ನೊಂದು ಆಚಾರ ವಿಚಾರಗಳನ್ನು ಇಟ್ಟುಕೊಳ್ಳಬಾರದು.
ನಮ್ಮ ಆಚಾರ ವಿಚಾರಗಳು ಮಾತ್ರ ನಮ್ಮ ಮನೆಯ ನಾಲ್ಕು ಗೋಡೆಯ ಒಳಗೆ ಇಟ್ಟುಕೊಳ್ಳಬೇಕು. ನಾವು ಸಮಾಜಕ್ಕೆ ಬಂದಾಗ ನಾನೊಬ್ಬ ಹಿಂದೂ ಅನ್ನುವ ಭಾವನೆಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಪೂಜಿಸುವಂತದ್ದಾಗಬೇಕು. ಇದಾದಾಗ ಮಾತ್ರ ಪವಿತ್ರವಾದಂತಹ ಭಾರತ ದೇಶ ಬಲಿಷ್ಠವಾಗಿ ವಿಶ್ವಗುರುವಾಗಲಿಕ್ಕೆ ಸಾಧ್ಯವಿದೆ. ನಾರಾಯಣ ಗುರುಗಳು ತಮ್ಮ ಸಮಾಜಕ್ಕೆ ಜೀವ ಜೀವನವನ್ನು ಕೊಟ್ಟಂತಹ ಶ್ರೇಷ್ಠ ಸಂತ. ಇವತ್ತಿನ ಈ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯಲ್ಲಿ ಬಸ್ ತಂಗುದಾಣ ನಿರ್ಮಿಸಿ ಉದ್ಘಾಟಣೆ ಕೊಡವೂರು ವಾರ್ಡ್ ನಲ್ಲಿ ನಡೆಯಿತು.
ಕೊಡವೂರುನಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ನಾಮಕರಣ ಮತ್ತು ಬಸ್ಸು ತಂಗುದಾಣಗಳಿವೆ. ಡಾ. ಬಿ ಆರ್ ಅಂಬೇಡ್ಕರ್ ಬಸ್ಸು ತಂಗುದಾಣ ಅದೇ ರೀತಿ ವೀರ ಸಾವರ್ಕರ್ ಮಾರ್ಗ, ಲಾಲ್ ಬಹಾದ್ದೂರ್ ಶಾಸ್ತ್ರೀ ಮಾರ್ಗ, ರಾಣಾ ಪ್ರತಾಪ್ ಸಿಂಗ್ ಮಾರ್ಗ, ಸುಭಾಷ್ ಚಂದ್ರ ಬೋಸ್ ಮಾರ್ಗ, ಡಾ. ಹೆಡ್ಗೆ ವಾರ್ ಮಾರ್ಗ, ತುಳು ಕವಿ ಅರುಣಾಬ್ಜ ಮಾರ್ಗ, ಬಿಎಸ್ ಆಚಾರ್ಯ ಮಾರ್ಗ, ಡಾ. ಭೀಮ್ ರಾವ್ ಮಾರ್ಗ, ಭಗತ್ ಸಿಂಗ್ ಮಾರ್ಗ, ಸ್ವಾಮಿ ವಿವೇಕಾನಂದ ಮಾರ್ಗ, ಇಂತಹ ಅನೇಕ ಮಾರ್ಗಗಳನ್ನು ನಾಮಕರಣ ಮಾಡಲಾಗಿದೆ. ಉದ್ದೇಶ ಏನು ಕೇಳಿದರೆ ಈ ದೇಶದ ಧರ್ಮ ಜೀವನ ನೀಡಿದವರ ನೆನಪು ನಿತ್ಯ ನಿರಂತರವಾಗಬೇಕು. ಮುಂದಿನ ಪೀಳಿಗೆ ಅದನ್ನು ನೆನೆಯುವುದರ ಮುಖಾಂತರ ವ್ಯಕ್ತಿಗಳ ನಿರ್ಮಾಣವಾಗಬೇಕು. ಅನ್ನುವ ದೃಷ್ಟಿಯಿಂದ ಇದೊಂದು ಪ್ರಯತ್ನ ಎಂದಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲಾರಿಗೂ ಧನ್ಯವಾದ ಅದೇ ರೀತಿ ಇದಕ್ಕೆ ಸಹಕರಿಸುವ ವೇದಿಕೆಯ ಮೇಲಿದ್ದ ನಮ್ಮ ಬಳಗದ ಅಧ್ಯಕ್ಷರು, ಗಣೇಶೋತ್ಸವ ಸಮಿತಿ ಲಕ್ಷ್ಮಿನಗರ, ಹಾಗೂ ಊರಿನ ಎಲ್ಲಾ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Leave a Reply