
ಕೋಟ : ರೋಟರಿ ಕ್ಲಬ್ ಕೋಟ ಸಿಟಿ ಹಾಗೂ ಆ್ಯನ್ಸ್ ಕ್ಲಬ್ ಕೋಟ ಸಿಟಿ ವತಿಯಿಂದ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆಯನ್ನು ಕ್ಲಬ್ ಸದಸ್ಯರಾದ ಸತೀಶ್ ಪೂಜಾರಿ ಅವರ ಮನೆಯ ಆವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷರಾದ ಪ್ರಕಾಶ್ ಹಂದಟ್ಟು, ಅಸಿಸ್ಟೆಂಟ್ ಗವರ್ನರ್ ಶ್ಯಾಮ್ ಸುಂದರ್ ನಾಯರಿ, ಮಾಜಿ ಅಸಿಸ್ಟೆಂಟ್ ಗವರ್ನರ್ ಚಂದ್ರಶೇಖರ ಮೆಂಡನ್, ಕಾರ್ಯದರ್ಶಿ ಕೃಷ್ಣ ಪೂಜಾರಿ ಪಿ, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಶಶಿಕಲಾ ಗಣೇಶ್, ಆ್ಯನ್ಸ್ ಕ್ಲಬ್ ಚೆರ್ಮೆನ್ ಡಾ. ಗಣೇಶ್ ಯು, ಕಾರ್ಯದರ್ಶಿ ಶಾರದಾ ಸತೀಶ್ ಪೂಜಾರಿ, ರೋಟರಿ ಕೋಟ ಸಿಟಿ ಮತ್ತು ಆ್ಯನ್ಸ್ ಕ್ಲಬ್ ಕೋಟ ಸಿಟಿ ಸದಸ್ಯರು ಉಪಸ್ಥಿತರಿದ್ದರು.
Leave a Reply