Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..


“ಕರ್ನಾಟಕದಲ್ಲಿ ಕೃಷಿ ಕುಟುಂಬಗಳ ಜೀವನೋಪಾಯ ಭದ್ರತೆ ಮತ್ತು ಸಂತೋಷ ಸೂಚ್ಯಂಕ: ಆರ್ಥಿಕ ವಿಶ್ಲೇಷಣೆ” ಎಂಬ ವಿಷಯಕ್ಕೆ ಕು.ನಳಿನಶ್ರೀ ಆರ್ ಎನ್ ರವರಿಗೆ ಡಾಕ್ಟರೇಟ್

ನಳಿನಶ್ರೀ ಆರ್.ಎನ್ ರವರಿಗೆ ಪಿ.ಹೆಚ್.ಡಿ ಪದವಿ
ಸರಕಾರಿ ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣ ಇಲ್ಲಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಕು.ನಳಿನಶ್ರೀ ಆರ್ ಎನ್ “ಕರ್ನಾಟಕದಲ್ಲಿ ಕೃಷಿ ಕುಟುಂಬಗಳ ಜೀವನೋಪಾಯ ಭದ್ರತೆ ಮತ್ತು ಸಂತೋಷ ಸೂಚ್ಯಂಕ: ಆರ್ಥಿಕ ವಿಶ್ಲೇಷಣೆ” ಎಂಬ ವಿಷಯದ ಬಗ್ಗೆ ಡಾ. ಕೆ ಬಿ ಉಮೇಶ್, ವಿಶ್ರಾಂತ ಸಂಶೋಧನಾ ನಿರ್ದೇಶಕರು, ಪ್ರಾಧ್ಯಾಪಕರು ಮತ್ತು ವಿಶ್ವವಿದ್ಯಾನಿಲಯದ ಮುಖ್ಯಸ್ಥರು (ನಿ), ಕೃಷಿ ಅರ್ಥಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 59 ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ಇವರು ಯುಜಿಸಿ ನೆಟ್, ಂSಖಃ ಓಇಖಿ ಮತ್ತು ಪಿ ಹೆಚ್ ಡಿ ಸಂಶೋಧನೆಗೆ ಯುಜಿಸಿ ನೀಡುವ ಜೆ.ಆರ್.ಎಫ್ ಫೆಲೋಶಿಪ್ ಅನ್ನು ಪಡೆದಿರುತ್ತಾರೆ.  15ಕ್ಕಿಂತ ಹೆಚ್ಚು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ  ವಿಚಾರ ಸಂಕಿರಣ, ಸಮ್ಮೇಳನ ಮತ್ತು ತರಬೇತಿಗಳಲ್ಲಿ ಭಾಗವಹಿಸುರುತ್ತಾರೆ ಮತ್ತು 10 ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುತ್ತಾರೆ.

Leave a Reply

Your email address will not be published. Required fields are marked *