
ಕೋಟ ಬ್ಲಾಕ್ ಕಾಂಗ್ರೆಸ್ “ಇಂದಿರಾ ಭವನ” ಕಚೇರಿನಲ್ಲಿ ಮಾಜಿ ಕೇಂದ್ರ ಸಚಿವರು ದಿ! ಆಸ್ಕರ್ ಫರ್ನಾಂಡಿಸ್ ರವರ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ ಎ ಕುಂದರ್ ಅವರು ದಿ! ಆಸ್ಕರ್ ಫೆರ್ನಾಂಡಿಸ್ ರವರು ಆದರ್ಶ ವ್ಯಕ್ತಿಯಾಗಿದ್ದರು. ಎಲ್ಲಿಯೂ ಪ್ರಚಾರ ಪಡೆಯದೇ ಮೌನವಾಗಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಕಾಂಗ್ರೆಸ್ ಪಕ್ಷನಲ್ಲಿ ಯಾವಾಗಲೂ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಧ್ವನಿಯಾಗಿ ನಿಂತವರು ಎಂದು ಅವರ ಹತ್ತಿರದ ಒಡನಾಡಿ ಶಂಕರ್ ಎ ಕುಂದರ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರ ಮೋಹನ್ ಪೂಜಾರಿ ಅವರು ಮಾತನಾಡಿ ದಿ! ಆಸ್ಕರ್ ಫರ್ನಾಂಡಿಸ್ ರವರು ನಾನು ನೋಡಿದ ಹಾಗೆ ಸಮಯಕ್ಕೆ ಜಾಸ್ತಿ ಬೆಲೆ ಕೊಡುತ್ತಾ ಇದ್ದವರು. ರಾಜಕೀಯನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕೆಲಸ ಹೇಳಿದರೂ ಅದನ್ನು ಚಾಚು ತಪ್ಪದೆ ಕೆಲಸ ಪೂರೈಸಿ ಕೊಡುವ ಏಕೈಕ ವ್ಯಕ್ತಿ. ಹಾಗೆ ಯಾವದೇ ಕೆಲಸದ ಕಡತಗಳು ಇದ್ದರೂ ತಡರಾತ್ರಿವರೆಗೂ ಅದನ್ನು ಪೂರೈಸಿ ಹೋಗುವ ಒಬ್ಬ ಆದರ್ಶ ರಾಜಕೀಯದ ಅಜಾತಶತ್ರು ಎಂದು ಮಾತನಾಡಿದರು.
ಇಂದಿನ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ಆದ ಬಸವ ಪೂಜಾರಿ ಗುಂಡ್ಮಿ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷರಾದ ದಿನೇಶ್ ಬಂಗೇರ ಗುಂಡ್ಮಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಅಕ್ರಮ – ಸಕ್ರಮ ಸದಸ್ಯರಾದ ರಾಜೇಶ್ ಕೆ ನೆಲ್ಲಿಬೆಟ್ಟು, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ನ ಜೊತೆ ಕಾರ್ಯದರ್ಶಿ ಶೇಖರ್ ಪಿ ಮರಕಾಲ, ಪಾಂಡೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಲೀಲಾವತಿ ಗಂಗಾಧರ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ಮಹಾಬಲ ಮಡಿವಾಳ, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಶ್ರೀಕಾಂತ್ ಆಚಾರ್, ಕೋಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಬಂಗೇರ, ರತ್ನಕರ್ ಪೂಜಾರಿ ಪಾರಂಪಳ್ಳಿ, ರಮೇಶ್ ಪೂಜಾರಿ ಮೂಡಹೋಳಿ, ರಾಜು ಪೂಜಾರಿ ಪಾರಂಪಳ್ಳಿ, ಯಾಶಿನ್ ಪಡುಕೆರೆ, ಸುರೇಶ್ ನೆಲ್ಲಿಬೆಟ್ಟು, ಹಾರುನ್ ರಶೀದ್ ಗುಂಡ್ಮಿ, ಉಮೇಶ್ ಪೂಜಾರಿ ಪಡುಬೈಲು, ಕೃಷ್ಣಮೂರ್ತಿ ಪೂಜಾರಿ ಪಡುಬೈಲು ಹಾಗೂ ನಾರಾಯಣ ಮೆಂಡನ್ ಪಡುಕೆರೆ ಉಪಸ್ಥಿತರಿದ್ದರು. ಗಣೇಶ್ ಕೆ ನೆಲ್ಲಿಬೆಟ್ಟು ಸ್ವಾಗತಿಸಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ರವೀಂದ್ರ ಕಾಮತ್ ಗುಂಡ್ಮಿ ಧನ್ಯವಾದಿಸಿದರು.
Leave a Reply