
ಕಾಪು : ಚಂದ್ರನಗರ ಖಿಲ್ರಿಯ ಜುಮ್ಮಾ ಮಸ್ಜಿದ್ ವತಿಯಿಂದ ಮಲ್ಲಾರು-ಮಜೂರು ಬದ್ರಿಯ ಜುಮ್ಮಾ ಮಸ್ಜಿದ್ ಅಧ್ಯಕ್ಷರು ಕಾಪುವಿನ ಖ್ಯಾತ ಸಮಾಜ ಸೇವಕರಾದ ಡಾ.ಫಾರೂಕ್ ಚಂದ್ರನಗರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಂದ್ರನಗರ ನನ್ನ ಹುಟ್ಟಿದ ಊರು ಇಲ್ಲಿಯ ಜನರ ಪ್ರೀತಿ ವಿಶ್ವಾಸ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಈ ಮಸ್ಜಿದ್ ಗೆ ಯಾವುದೇ ವರಮಾನ ಇಲ್ಲದಿದ್ದರೂ ಇಲ್ಲಿಯ ಯುವಕರು ಜಮಾತಿಗರ ಸೇವೆ ದೇವರು ಮೆಚ್ಚುವಂತಹದು ಎಲ್ಲರಿಗೂ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಉದ್ಯಮಿ ಏನ್.ಟಿ ಎಕ್ಸ್ ಪ್ರೆಸ್ ಮಾಲಕರಾದ ಪರ್ಕಳ ರಜಬ್ ಬ್ಯಾರಿ, ಉದ್ಯಮಿ ಅಬ್ದುಲ್ಲ ಉಂಜಿ ಕತಾರ್, ಮೊಯಿದಿನ್ ಬ್ಯಾರಿ ಪರ್ಕಳ, ಖಿಲ್ರಿಯ ಜುಮ್ಮಾ ಮಸ್ಜಿದ್ ಖತಿಬರಾದ ಮುಸ್ತಫಾ ಸಖಾಫಿ, ಖಿಲ್ರಿಯ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಶಂಶುದ್ದಿನ್, ಮಸ್ಜಿದ್ ಅಭಿವೃದ್ಧಿ ಅಧ್ಯಕ್ಷರಾದ ಕೆ. ಎಂ ಉಮ್ಮರಬ್ಬ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Leave a Reply