
ಉಡುಪಿ ನಗರದ ಹೃದಯ ಭಾಗದಲ್ಲಿರುವ ಪ್ರಖ್ಯಾತ ದಂತ ಚಿಕಿತ್ಸಾಲಯ ಡೆಂಟಾ ಕೇರ್ ನ ಮಾಲಿಕರಾದ ಡಾ ll ವಿಜಯೇಂದ್ರ ವಸಂತ್ ಇವರು ಶ್ರೀ ಪ್ರಕಾಶಚಂದ್ರ ಶೆಟ್ಟಿ, ಬ್ರಹ್ಮಾವರ ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಶ್ರೀ ಭುವನೇಂದ್ರ ಕಿದಿಯೂರ್-ಹೋಟೆಲ್ ಕಿದಿಯೂರ್, ಶ್ರೀ ಪ್ರಭಾಕರ್ ನಾಯಕ್ ಅಮ್ಮುಂಜೆ-ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, , ಶ್ರೀ ಯುವರಾಜ್ ಸಾಲಿಯಾನ್ ಮಸ್ಕತ್ ಇವರುಗಳ ಜೊತೆಗೂಡಿ ಕಳೆದ ಎರಡು ವರ್ಷಗಳಂತೆ ಈ ವರ್ಷವೂ ಡೆಂಟಾ ಕೇರ್ ನ ಆಡಳಿತ ಮಂಡಳಿಯ ತಂಡ ಅದ್ದೂರಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹೋಟೆಲ್ ಕಿದಿಯೂರ್ ನ ಶೇಷಶಯನ ಹಾಲ್ ನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಪರಮ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಭಾವಿ ಪರ್ಯಾಯ ಪೀಠಾರೋಹಣ ಗೈಯಲಿರುವ ಪರಮ ಪೂಜ್ಯ ಶ್ರೀ ಶ್ರೀ ವೇದವರ್ಧನ ತೀರ್ಥರು ಮಕ್ಕಳನ್ನು/ ಪೋಷಕರನ್ನು ಆಶೀರ್ವದಿಸಿದರು.

ಮುಖ್ಯ ಅತಿಥಿಗಳಾಗಿ ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್, ಅವರ ಪತ್ನಿ ಶ್ರೀಮತಿ ಶ್ರುತಿ, ಸು ಫ್ರಮ್ ಸೋ ಖ್ಯಾತಿಯ ಶ್ರೀಮತಿ ಪೂರ್ಣಿಮಾ ಸುರೇಶ್, ಪರ್ಯಾಯ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಮೋಹನ್ ಭಟ್ ಹಾಗೂ ಆಯೋಜಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಡಾ.ವಿಜಯೇಂದ್ರ ಅವರು ಸ್ವಾಗತಿಸಿ ಆರೋಗ್ಯ ಅಂದರೆ ದೈಹಿಕ ಮಾತ್ರವಲ್ಲ ಜನ ಸಾಮಾನ್ಯರ ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಸುದೃಢ ವಾಗಿ ಇರಿಸುವ ಉದ್ದೇಶದಿಂದ ವೈದ್ಯನಾಗಿ ಇಂತಹ ಕಾರ್ಯಕ್ರಮ ನಡೆಸುವುದು ನಮ್ಮ ಕರ್ತವ್ಯ ಎಂದರು.
ಶ್ರೀ ಕೃಷ್ಣ, ರಾಧೆ, ಶ್ರೀ ಕೃಷ್ಣ ನ ಜೀವನ ಕಥೆಯಲ್ಲಿ ಬರುವ ಪಾತ್ರಗಳ ಕೃಷ್ಣ ಕಥಾ ವೇಷ ಸ್ಪರ್ಧೆ ಹಾಗೂ ಶಂಖ ಮೊಳಗಿಸುವ ಶ್ರೀ ಕೃಷ್ಣ ಪಾಂಚಜನ್ಯ ಸ್ಪರ್ಧೆಗಳಲ್ಲಿ ನಿರೀಕ್ಷೆಗೂ ಮಿಗಿಲಾಗಿ 110 ಮಕ್ಕಳು ವೇಷ ಭಾಗವಹಿಸಿ ಸಂಭ್ರಮಿಸಿದರು. ವಿಜೇತ ಮಕ್ಕಳನ್ನು ಅಭಿನಂದಿಸಿ ಪಾರಿತೋಷಕಗಳನ್ನು ನೀಡಲಾಯಿತು ಕಾರ್ಯಕ್ರಮದ ಕೊನೆಯಲ್ಲಿ ಅದೃಷ್ಟಶಾಲಿ ಮಗುವಿಗೆ ಚೀಟಿ ಎತ್ತಿ ಬಾಲ ಕೃಷ್ಣನ ವಿಗ್ರಹ ನೀಡಲಾಯಿತು. ಶ್ರೀ ಪ್ರಕಾಶಚಂದ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ಡೆಂಟಾ ಕೇರ್ ನ ಪ್ರೀತಿ ಸನಿಲ್ ಕಾರ್ಯಕ್ರಮ ನಿರ್ವಹಿಸಿದರು. ಹಾಗೂ ಸುಪ್ರೀತ, ರಕ್ಷ ಹಾಗೂ ಭವಾನಿ, ಡಾ। ಸಂಧ್ಯಾ ಕಾರ್ಯಕ್ರಮ ಸಂಯೋಜಿಸಿದರು ಕೃಷ್ಣ ಲೀಲೋತ್ಸವ ಸಂದರ್ಭದಲ್ಲಿ ಡೆಂಟಾ ಕೇರ್ ವತಿಯಿಂದ ಡಾ ಲ್ಲ ವಿಜಯೇಂದ್ರ ನೇತೃತ್ವದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಮುಂಬಯಿಯ ಮಾನವ ಪಿರಮಿಡ್ ನಿಂದ ದಹಿ ಹಂಡಿ- ಮೊಸರು ಗಡಿಗೆ ಒಡೆಯುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು
Leave a Reply