
ಕೋಟ: ಗರ್ಭಿಣಿಯರು ಆಹಾರ ಕ್ರಮಗಳನ್ನು ಸಮರ್ಪಕವಾಗಿ ಗುಣಮಟ್ಟದ ಆಹಾರ ಕ್ರಮಗಳನ್ನು ಅನುಸರಿಸುವಂತೆ ಕೋಟದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಾಧವ ಪೈ ಹೇಳಿದರು.
ಕೋಟತಟ್ಟು ಪಡುಕರೆ ಅರಮದೇಗುಲದ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ,ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ,ಕೋಟತಟ್ಟು ಗ್ರಾಮಪಂಚಾಯತ್, ಸಮುದಾಯ ಆರೋಗ್ಯ ಕೇಂದ್ರ ಕೋಟ ಇವರ ಆಶ್ರಯದಲ್ಲಿ ಕೇಂದ್ರ ಸರಕಾರದ ಪೋಷಣ್ ಅಭಿಯಾನ,ಅನ್ನಪ್ರಾಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸರಕಾರ ಯೋಜನೆಗಳು ಆರೋಗ್ಯವಂತ ಸಮಾಜಕ್ಕೆ ಪೂರಕ ವಾತಾವರಣ ಕಲ್ಪಿಸುತ್ತಿದ್ದು ಇದರ ಸದ್ಭಳಕೆ ಮಾಡಿಕೊಳ್ಳಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಒಂದು ವರ್ಷದ ಒಳಗಿನ ಪುಟಾಣಿಗಳಿಗೆ ಅನ್ನಪ್ರಾಶನ ಹಾಗೂ ಐವರು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೆರಿತು.

ಕಾರ್ಯಕ್ರಮದಲ್ಲಿ ವಿವಿಧ ತರದ ತರಕಾರಿ ವಸ್ತುಗಳ ಪ್ರದರ್ಶನ ವಿವಿಧ ಪೌಷ್ಟಿಕಾಹಾರ ಸಾಮಾಗ್ರಗಳು ಗಮನ ಸೆಳೆದವು. ಸಭೆಯ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ ವಹಿಸಿದ್ದರು. ಸಭೆಯಲ್ಲಿ ಕೋಟತಟ್ಟು ಪಂಚಾಯತ್ ಸದಸ್ಯೆ ವಿದ್ಯಾ ಎಸ್ ಸಾಲಿಯಾನ್,ಸ್ಥಳೀಯ ಆರೋಗ್ಯ ಉಪಕೇಂದ್ರದ ಗಾಯಿತ್ರಿ ಗಿರೀಶ್, ಕೋಟ ಹಾಗೂ ಕೋಟತಟ್ಟು ಭಾಗದ ಅಂಗನವಾಡಿ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಕಲ್ಮಾಡಿ ಅಂಗನವಾಡಿಯ ಕಾರ್ಯಕರ್ತೆ ಜಯಲಕ್ಷ್ಮೀ ನಿರೂಪಿಸಿದರೆ, ಕೋಟತಟ್ಟು ಪಡುಕರೆ ಅಂಗನವಾಡಿ ಕಾರ್ಯಕರ್ತೆ ಯಶೋಧ ವಿ ಪೂಜಾರಿ ವಂದಿಸಿದರು.

ಕೋಟತಟ್ಟು ಪಡುಕರೆ ಅರಮದೇಗುಲದ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ,ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ , ಕೋಟತಟ್ಟು ಗ್ರಾಮಪಂಚಾಯತ್, ಸಮುದಾಯ ಆರೋಗ್ಯ ಕೇಂದ್ರ ಕೋಟ ಇವರ ಆಶ್ರಯದಲ್ಲಿ ಕೇಂದ್ರ ಸರಕಾರದ ಪೋಷಣ್ ಅಭಿಯಾನ, ಅನ್ನಪ್ರಾಶನ ಕಾರ್ಯಕ್ರಮವನ್ನು ಕೋಟದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಾಧವ ಪೈ ಉದ್ಘಾಟಿಸಿದರು. ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಕೋಟತಟ್ಟು ಪಂಚಾಯತ್ ಸದಸ್ಯೆ ವಿದ್ಯಾ ಎಸ್ ಸಾಲಿಯಾನ್ ಉಪಸ್ಥಿತರಿದ್ದರು.
Leave a Reply