
ಕೋಟ: ಮೊಗವೀರ ಗ್ರಾಮ ಸಭಾ ಬಾಳ್ಕುದ್ರು ಇದರ ಗ್ರಾಮಸಭೆಯ ಸೆ. 14ರಂದು ಭಾನುವಾರ ಇಲ್ಲಿನ ವಾಗೀಶ ಮಂಟಪದಲ್ಲಿ ನಡೆಯಿತು. ಈ ವೇಳೆ ನೂತನ ಆಡಳಿತ ಮಂಡಳಿಗೆ ಸಮಿತಿ ರಚನೆ ಪ್ರಕ್ರಿಯೆ ನಡೆಯಿತು.
ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್, ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಮರಕಾಲ, ರಾಜೇಂದ್ರ ಸುವರ್ಣ ಹಿರಿಯಡ್ಕ , ಚಂದ್ರ ಬಂಗೇರ , ಕಾರ್ಯದರ್ಶಿ ಮಂಜುನಾಥ ಸುವರ್ಣ ,ವಿಠಲ ಕರ್ಕೇರ , ಬಾಲಕೃಷ್ಣ ಕುಂದರ್, ದೇವು, ಕೇಶವ ಕುಂದರ್ ಇವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಗೊಳಿಸಲಾಯಿತು.
ಗ್ರಾಮಸಭಾದ ಗೌರವಾಧ್ಯಕ್ಷರಾಗಿ ಕೇಶವ ಕುಂದರ್ , ನೂತನ ಗುರಿಕಾರರಾಗಿ ವಿಶ್ವನಾಥ್ ಅಮೀನ್,ಜೊತೆ ಗುರಿಕಾರರಾಗಿ ಸತೀಶ್ ಸುವರ್ಣ, ಗ್ರಾಮ ಸಭಾ ಅಧ್ಯಕ್ಷರಾಗಿ ಭಾಸ್ಕರ್ ಅಮೀನ್, ಉಪಾಧ್ಯಕ್ಷರುಗಳಾಗಿ ಉಮೇಶ್ ಸುವರ್ಣ , ನಾಗರಾಜ ಬಂಗೇರ, ರಾಧ ಟೀಚರ್ ಹಾಗೂ ಕಾರ್ಯದರ್ಶಿಗಳಾಗಿ ಸುನೀಲ್ ಬಂಗೇರ , ಕೋಶಾಧಿಕಾರಿಯಾಗಿ ಮನ್ವಿತ್ ಬಂಗೇರ ಆಯ್ಕೆಯಾದರು.
ಗೌರವ ಸಲಹಾ ಸಮಿತಿಗೆ ಉತ್ತರ ಎಂ ಕರ್ಕೇರಾ, ರಾಗಿಣಿ ಬಂಗೇರ , ಶಂಕರ ತಿಂಗಳಾಯ , ಲಕ್ಷಣ ಸುವರ್ಣ , ರವಿ ಚಿನ್ನು ಆಯ್ಕೆಯಾದರು. ಕೋಟ ಸಾಲಿಗ್ರಾಮ ಗ್ರಾಮಸಭೆಗಳ ಉಸ್ತುವಾರಿಗಳಾಗಿ ಕೃಷ್ಣಮೂರ್ತಿ ಮರಕಾಲ ನೂತನ ಆಡಳಿತ ಮಂಡಳಿ ರಚನೆಗೊಳಿಸಿದರು.ಸಂಯುಕ್ತ ಸಭಾದ ಅಧ್ಯಕ್ಷರಾದ ಸತೀಶ್ ಅಮೀನ್ ರವರು ಗ್ರಾಮಸಭಗಳ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿದರು.
ಮೊಗವೀರ ಗ್ರಾಮ ಸಭಾ ಬಾಳ್ಕುದ್ರು ಇದರ ಗ್ರಾಮ ಸಭೆಯ ಸೆ. 14ರಂದು ಭಾನುವಾರ ಇಲ್ಲಿನ ವಾಗೀಶ ಮಂಟಪದಲ್ಲಿ ನಡೆಯಿತು. ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷ ಸತೀಶ್ ಅಮೀನ್, ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಮರಕಾಲ, ರಾಜೇಂದ್ರ ಸುವರ್ಣ ಹಿರಿಯಡ್ಕ , ಚಂದ್ರ ಬಂಗೇರ , ಕಾರ್ಯದರ್ಶಿ ಮಂಜುನಾಥ ಸುವರ್ಣ ,ವಿಠಲ ಕರ್ಕೇರ , ಬಾಲಕೃಷ್ಣ ಕುಂದರ್, ದೇವು, ಕೇಶವ ಕುಂದರ್ ಇದ್ದರು.
Leave a Reply