
ಕೋಟ: ಕೋಟ ಹದಿನಾಲ್ಕು ಗ್ರಾಮಗಳಲ್ಲಿದ್ದ ಸಾಲಿಗ್ರಾಮದ ಶ್ರೀ ಮದ್ಯೋಗಾನಂದ ಗುರು ನರಸಿಂಹನ ಭಕ್ತರು ಇಂದು ಜಗತ್ತಿನಾದ್ಯಂತ ಬದುಕನ್ನು ಕಟ್ಟಿ ಕೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಪರಿಶ್ರಮ ಪ್ರಾಮಾಣಿಕತೆಯಿಂದ ಸಾಧನೆಯನ್ನು ಮಾಡುತ್ತಿರುವವರಲ್ಲಿ ಸದ್ಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಹರಿ ನರಸಿಂಹ ಉಪಾಧ್ಯಾಯರು ಒಬ್ಬರಾಗಿರುವುದು ಅಭಿಮಾನದ ಸಂಗತಿ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅಭಿಪ್ರಾಯಪಟ್ಟರು.
ಇತ್ತೀಚಿಗೆ ಶ್ರೀ ಉಪಾಧ್ಯಾಯರ 12ನೇ ಕೃತಿ ಮಾತಿನಿಂ ಹಗೆ ಒಲವು ಎಂಬ ಮುಕ್ತಕ ಸಂಕಲನವನ್ನು ದೇವತಾ ಸನ್ನಿಧಿಯಲ್ಲಿ ಲೋಕಾರ್ಪಣೆ ಮಾಡಿ ಶುಭವನ್ನು ಕೋರಿದರು.
ಈ ಸಂದರ್ಭದಲ್ಲಿ ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆ, ಸಾಲಿಗ್ರಾಮ ಅಂಗಸoಸ್ಥೆಯ ಅಧ್ಯಕ್ಷ ಪಿ.ಸಿ.ಹೊಳ್ಳ, ಎ.ಜಗದೀಶ ಕಾರಂತ, ದೇವಳದ ಉಪಾಧ್ಯಕ್ಷ ಗಣೇಶ ಮೂರ್ತಿ ನಾವಡ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಕೇಂದ್ರ ಕಾರ್ಯಕಾರಿಣಿ ಸದಸ್ಯ ಗೆಳೆಯರ ಬಳಗ ತಾರಾನಾಥ ಹೊಳ್ಳರ ಸಹಿತ ಜಗತ್ತಿನ ಕೇಂದ್ರ ಮಹಾಧಿವೇಶನಕ್ಕೆಂದು ಆಗಮಿಸಿದ್ದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಇತ್ತೀಚಿಗೆ ಹರಿ ನರಸಿಂಹ ಉಪಾಧ್ಯಾಯರ 12ನೇ ಕೃತಿ ಮಾತಿನಿಂ ಹಗೆ ಒಲವು ಎಂಬ ಮುಕ್ತಕ ಸಂಕಲನವನ್ನು ದೇವತಾ ಸನ್ನಿಧಿಯಲ್ಲಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ಲೋಕಾರ್ಪಣೆಗೊಳಿಸಿದರು. ಕೂಟ ಮಹಾಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆ, ಸಾಲಿಗ್ರಾಮ ಅಂಗಸoಸ್ಥೆಯ ಅಧ್ಯಕ್ಷ ಪಿ.ಸಿ.ಹೊಳ್ಳ, ಎ.ಜಗದೀಶ ಕಾರಂತ, ದೇವಳದ ಉಪಾಧ್ಯಕ್ಷ ಗಣೇಶ ಮೂರ್ತಿ ನಾವಡ ಇದ್ದರು.
Leave a Reply