
ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಒಟ್ಟು ₹25 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಈ ಅನುದಾನದಿಂದ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತ್‌ಗೆ ₹50 ಲಕ್ಷ ರೂ.ಗಳಂತೆ ಹಣ ಲಭ್ಯವಾಗಲಿದೆ.
ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಅಭಿನಂದಿಸಿರುವ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರು ಈ ಕುರಿತು ಮಾತನಾಡುತ್ತಾ, “ರಾಜಕೀಯ ಪಕ್ಷ ಅಥವಾ ವ್ಯಕ್ತಿಗತ ರಾಜಕೀಯಪರವಾಗಿ ತಾರತಮ್ಯವಿಲ್ಲದೆ ಜನತೆಗೆ ನೇರವಾಗಿ ಲಾಭವಾಗುವಂತೆ ಈ ಅನುದಾನ ಬಿಡುಗಡೆ ಮಾಡಿರುವುದು ರಾಜ್ಯ ಸರ್ಕಾರದ ದಿಟ್ಟ ಹೆಜ್ಜೆ. ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ಗಳ ಜೊತೆಗೆ, ಜನತೆಗೆ ನಿಜವಾದ ‘ಅಭಿವೃದ್ಧಿಯ ಗ್ಯಾರಂಟಿ’ ನೀಡಲು ಇದು ಸಾಕ್ಷಿ” ಎಂದರು.
ಇದನ್ನು ನೋಡಿದ ಬಳಿಕ ಕ್ಷೇತ್ರದ ಬಿಜೆಪಿಯ ನಾಯಕರು ಹಾಗೂ ಶಾಸಕರು ಕೂಡ ತಮ್ಮ ಜವಾಬ್ದಾರಿಯನ್ನು ಮನಗಂಡು, ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಬೇಕೆಂದು ಅವರು ಹೇಳಿದರು. ಅನುದಾನವನ್ನು ಗ್ರಾಮ ಮಟ್ಟದಲ್ಲಿ ಸರಿಯಾಗಿ ಬಳಸಿಕೊಳ್ಳಲು ಸ್ಥಳೀಯ ಆಡಳಿತಗಳು ಸದೃಢ ಯೋಜನೆ ರೂಪಿಸಿ, ಯೋಜಿತವಾಗಿ ಕಾರ್ಯನಿರ್ವಹಿಸಬೇಕೆಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿಯವರು ಮಾಧ್ಯಮಗಳ ಮುಂದೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Leave a Reply