
ಕೋಟ: ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಆಶ್ರಯದಲ್ಲಿ ಉಪ್ಪೂರ ಕುಟುಂಬದ ಸಹಕಾರದಲ್ಲಿ ನೀಡಲಾಗುವ ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ 2025 ಪ್ರಶಸ್ಥಿಗೆ ಬ್ರಹ್ಮಾವರದ ಕೃಷ್ಣಸ್ವಾಮಿ ಜೋಯಿಸರನ್ನು ಆಯ್ಕೆ ಮಾಡಲಾಗಿದೆ.
ಕಲಾಕೇಂದ್ರದಲ್ಲಿ ನಡೆಯುವ ಯಕ್ಷ ಸಪ್ತೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದುಕಲಾಕೇಂದ್ರದ ಅದ್ಯಕ್ಷರಾದ ಆನಂದ ಸಿ ಕುಂದರ್ ಅದ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಂಗ ನಿರ್ದೇಶಕರಾದ ಆಲ್ವಿನ್ ಆಂದ್ರಾದೆ,ಉಪ್ಪೂರರ ಪುತ್ರ ದಿನೇಶ್ ಉಪ್ಪೂರ್ ಉಪಸ್ಥಿತರಿದ್ದು, ಗಣೇಶ್ ಬ್ರಹ್ಹಾವರ ಇವರು ಅಭಿನಂದನಾ ಮಾತುಗಳನ್ನು ಆಡಲಿರುವರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಛಾಯಾ ತರಂಗಿಣಿ ಕೋಟ ಇವರಿಂದ ನಾದ ಸಂಭ್ರಮ ಮತ್ತು ಯಕ್ಷಗಾನದ ಈಗಿನ ಬೆಳವಣಿಗೆಯ ಸಾಧಕ ಭಾದಕಗಳು ಎಂಬ ವಿಚಾರದಲ್ಲಿ ಹೋನ್ನಾವರದ ನಾರಾಯಣ ಯಾಜಿ ಸಾಲೆಬೈಲು ಇವರ ಉಪನ್ಯಾಸ ಕಾರ್ಯಕ್ರಮವಿದೆ.ನಂತರ ಆಯ್ದ ಕಲಾವಿದರಿಂದ ದಕ್ಷ ಯಜ್ಜ ಎಂಬ ಯಕ್ಷಗಾನ ಪ್ರದರ್ಶನವಿದೆಯೆಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.
Leave a Reply