
ಉಡುಪಿ ಜಿಲ್ಲೆಯ ಪೌರಾಣಿಕ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ಪವಿತ್ರ ದೀಪೋತ್ಸವದ ಸಜ್ಜುಗಳು ನಡೆಯುತ್ತಿವೆ. ಈ ಹಿನ್ನೆಲೆ ‘ಉಡುಪಿ ದರ್ಶನ’ ವತಿಯಿಂದ “ಬೆಳಕಿನ ದೀಪ ಬೆಳಗಿಸಿ – ಜೀವನವನ್ನೂ ಬೆಳಗಿಸಿ” ಎಂಬ ಆಶಯದೊಂದಿಗೆ ವಿಶೇಷ ದೇಣಿಗೆ ಅಭಿಯಾನವನ್ನು ಆರಂಭಿಸಿದೆ.
ಈ ಅಭಿಯಾನದ ಭಾಗವಾಗಿ ಜಿಲ್ಲೆಯ ದೇವಸ್ಥಾನಗಳಲ್ಲಿ ಸಾವಿರಾರು ಮಣ್ಣಿನ ದೀಪಗಳನ್ನು ಬೆಳಗಿಸಲು ಅಗತ್ಯ ವಸ್ತುಗಳನ್ನು ದೇಣಿಗೆಯಾಗಿ ನೀಡಲಾಗುತ್ತಿದೆ. ಒಂದು ದೇವಾಲಯಕ್ಕೆ 1008 ಮಣ್ಣಿನ ದೀಪಗಳು, 2000 ಹತ್ತಿ ಬತ್ತಿಗಳು ಹಾಗೂ 5 ಲೀಟರ್ ಎಳ್ಳೆಣ್ಣೆ ಒಳಗೊಂಡ ಒಂದು ಸಂಗ್ರಹವನ್ನು ನೀಡುವ ಉದ್ದೇಶ ಹೊಂದಲಾಗಿದೆ.
ದೇಣಿಗೆಯ ಮೊತ್ತವನ್ನು ₹4000 ಎಂದು ನಿಗದಿಪಡಿಸಲಾಗಿದ್ದು, ಆಸಕ್ತರು ತಮ್ಮ ಕೊಡುಗೆಯನ್ನು ನೀಡುವ ಮೂಲಕ ದೇವಾಲಯಗಳ ದೀಪೋತ್ಸವದಲ್ಲಿ ಭಾಗಿಯಾಗಬಹುದು.
ಈ ಅಭಿಯಾನದಿಂದ ಸ್ಥಳೀಯ ಕುಂಬಾರರು (ಮಣ್ಣಿನ ದೀಪ ತಯಾರಕರು) ಮತ್ತು ಹತ್ತಿ ಬತ್ತಿ ತಯಾರಿಸುವ ಮಹಿಳೆಯರಿಗೆ ಆರ್ಥಿಕ ಸಹಾಯ ದೊರೆಯಲಿದೆ. ಇದರೊಂದಿಗೆ ಉಡುಪಿ ಜಿಲ್ಲೆಯ ಐತಿಹಾಸಿಕ ದೇವಸ್ಥಾನಗಳಲ್ಲಿ ಕಾರ್ತಿಕ ದೀಪೋತ್ಸವವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಂಗೊಳಿನೊಂದಿಗೆ ಆಚರಿಸಲು ಸಹಕಾರ ದೊರೆಯಲಿದೆ.
“ಈ ದೇಣಿಗೆಯು ಕೇವಲ ಹಣಕಾಸಿನ ಸಹಾಯವಲ್ಲ, ಅದು ಸಂಪ್ರದಾಯಕ್ಕೆ ಗೌರವ, ಜೀವನೋಪಾಯಕ್ಕೆ ಬಲ, ಮತ್ತು ಭಕ್ತಿಯ ಬೆಳಕನ್ನು ಹಂಚಿಕೊಳ್ಳುವ ಒಂದು ಪ್ರಯತ್ನ,” ಎಂದು ‘ಉಡುಪಿ ದರ್ಶನ’ದ ಆಯೋಜಕ ತೇಜಸ್ವಿ ಎಸ್ ಆಚಾರ್ಯ ತಿಳಿಸಿದ್ದಾರೆ.
ದೇಣಿಗೆ ನೀಡಲು ಅಥವಾ ಹೆಚ್ಚಿನ ಮಾಹಿತಿಗಾಗಿ ಈ ಅಭಿಯಾನದ ಆಯೋಜಕರಾದ, ‘ಉಡುಪಿ ದರ್ಶನ’ದ ಶ್ರೀ ತೇಜಸ್ವಿ ಎಸ್ ಆಚಾರ್ಯ ರವರನ್ನು (Ph: 7411521633) ಸಂಪರ್ಕಿಸಬಹುದಾಗಿದೆ.
Leave a Reply