
ಗಂಗೊಳ್ಳಿ: ಉಡುಪಿ ಜಿಲ್ಲೆಯ ಬೈಂದೂರು-ಕುಂದಾಪುರ ರಾ.ಹೆ 66 ರ ಮಾರ್ಗವಾಗಿ ಲಾರಿಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ರವಾನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಪೊಲೀಸರು ದಾಳಿ ನಡೆಸಿ, ಚಾಲಕನನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ : ಪಿರ್ಯಾದುದಾರರಾದ ಸುರೇಶ್ ಹೆಚ್.ಎಸ್ ಆಹಾರ ನಿರೀಕ್ಷರು, ಕುಂದಾಪುರರವರಿಗೆ ದಿನಾಂಕ: 24-10-2025 ರಂದು ಕುಂದಾಪುರ ತಾಲೂಕು, ತ್ರಾಸಿ ಗ್ರಾಮದ ಮರವಂತೆ ಬೀಚ್ ಹತ್ತಿರದ ಕ್ರಾಸ್ ರಸ್ತೆಯಲ್ಲಿ ಬೈಂದೂರು-ಕುಂದಾಪುರ ರಾ.ಹೆ 66 ರ ಮಾರ್ಗವಾಗಿ ಲಾರಿಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ರವಾನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ, ಪಿರ್ಯಾದಿದಾರರು ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ ಸಮಯ ಬೆಳಿಗ್ಗೆ 10:50 ಗಂಟೆಗೆ ಒಂದು ಟಾಟಾ ಕಂಪೆನಿಯ 1412 ನೇ ಲಾರಿ ಬರುತ್ತಿರುವುದನ್ನು ಕಂಡು, ಲಾರಿ ನಿಲ್ಲಿಸಿದಾಗ, ಲಾರಿ ಚಾಲಕನು ವಾಹನ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದವನನ್ನು ಠಾಣಾ ಸಿಬ್ಬಂದಿಗಳ ಸಹಾಯದಿಂದ ಸುತ್ತುವರಿದು ವಶಕ್ಕೆ ಪಡೆದು ವಿಚಾರಿಸಲಾಗಿ, ಆತನ ಹೆಸರು ನಂಜುಂಡ ಎಂಬುದಾಗಿದ್ದು, ಭಟ್ಕಳದ ಶಫೀಕ್ ಸಾಹೇಬ್ ಎನ್ನುವವರು ತನ್ನ ಲಾರಿ KA 52 B 3687 ನೇದಕ್ಕೆ, 214 ಚೀಲ ಗಳಲ್ಲಿ, ಒಟ್ಟು 107 ಕ್ವಿಂಟಾಲ್ ಅಕ್ಕಿಯನ್ನು ಲಾರಿಗೆ ತುಂಬಿಸಿ ಲೋಡ್ ಮಾಡಿದ್ದು, ಶ್ರೀ ಬಸವೇಶ್ವರ ಅಗ್ರೋ ರೈಸ್ ಇಂಡಸ್ಟ್ರೀಸ್ 2 ನೇ ಅಡ್ಡ ರಸ್ತೆ ಎಂ. ಜಿ ರಸ್ತೆ ಮಂಡ್ಯ ಎನ್ನುವವರ ರೈಸ್ ಮಿಲ್ಲಿಗೆ ತಲುಪಿಸಲು ಕಳುಹಿಸಿದ್ದು ಎಂಬುದಾಗಿ ತಿಳಿಸಿದ್ದು, ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹೀರವಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿದೆ. ಅಕ್ಕಿಯ ಮೌಲ್ಯ 2,56,800/- /ರೂ ಆಗಿರುತ್ತದೆ. ಸಾಗಾಟಮಾಡುತ್ತಿದ್ದ KA 52 B 3687 ನೇ ಮೆರೂನ್ ಬಣ್ಣದ ಟಾಟಾ ಕಂಪೆನಿಯ 1412 ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ನಂಜುಂಡ ಕೆ. ಆರ್ ಹಾಗೂ ಭಟ್ಕಳದ ಶಫೀಕ್ ಸಾಹೇಬ್ ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವರೇ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 101/2025 ಕಲಂ: 3,6,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ರಂತೆ ಪ್ರಕರಣ ದಾಖಲಿಸಲಾಗಿದೆ.














Leave a Reply