
ಕೋಟ: ಶ್ರೀ ಅಘೋರೇಶ್ವರ ಕಲಾ ರಂಗ ಕಾರ್ತಟ್ಟು ಚಿತ್ರಪಾಡಿ, ಪ್ರತಿ ವರ್ಷ ಕೊಡಮಾಡುವ ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ ಹೊಸಬದುಕು ಆಶ್ರಮ, ತೋಡುಕಟ್ಟು, ಪಾರಂಪಳ್ಳಿ ಇದರ ಪ್ರವರ್ತಕರಾದ ವಿನಯಚಂದ್ರ ಸಾಸ್ತಾನ ಇವರು ಆಯ್ಕೆಯಾಗಿದರು.
ವಿನಯಚಂದ್ರ ಸಾಸ್ತಾನ ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆ ನಿರತರಾಗಿದ್ದು ಪ್ರಸ್ತುತ ಸಾಲಿಗ್ರಾಮ ಪರಿಸರಲ್ಲಿ ಹೊಸಬದುಕು ಆಶ್ರಮ ನಡೆಸುತ್ತಿದ್ದಾರೆ ಅಲ್ಲದೆ ಹಲವಾರು ಅನಾಥ ವ್ಯಕ್ತಿಗಳಿಗೆ ಆಶ್ರಯದಾತರಾಗಿ,ರಸ್ತೆ ಬದಿಯಲ್ಲಿ ಅದೆಷ್ಟೊ ಗಾಯಗೊಂಡ ಹೈನುಗಳಿಗೆ ಮರುಜೀವ ನೀಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ನವಂಬರ್ 15ರ ಸಂಜೆ 7:00 ಗಂಟೆಗೆ ಶ್ರೀ ಅಘೋರೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದ್ದು ಪದಪ್ರದಾನ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಅಘೋರೇಶ್ವರ ಕಲಾರಂಗದ ಅಧ್ಯಕ್ಷರಾದ ನಿತ್ಯಾನಂದ ನಾಯರಿ ತಿಳಿಸಿದ್ದಾರೆ.














Leave a Reply