
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಬ್ರಹ್ಮಾವರ ತಾಲೂಕು, ಪಾಂಡೇಶ್ವರ ವಲಯದ ಗುಂಡ್ಮಿ ಕಾರ್ಯ ಕ್ಷೇತ್ರದ ಸಮೃದ್ಧಿ ವಾತ್ಸಲ್ಯ ತಂಡ ಸದಸ್ಯರಾದ ಗೋದಾವರಿ ಇವರ ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಧರ್ಮಸ್ಥಳದಿಂದ ಪೂಜ್ಯರು ಮತ್ತು ಅಮ್ಮನವರು ಮಂಜೂರು ಮಾಡಿದ 16,000 ರೂ.ಗಳ ಮಂಜುರಾತಿ ಪತ್ರವನ್ನು ಗುಂಡ್ಮಿ ಒಕ್ಕೂಟದ ಅಧ್ಯಕ್ಷ ಶೇಖರ್ ಪೂಜಾರಿಯವರು ವಿತರಿಸಿದರು. ಕಾರ್ಯಕ್ರಮದಲ್ಲಿ ತಂಡದ ಸದಸ್ಯರಾದ ಕಾವೇರಿ, ಸುರೇಂದ್ರ ಮತ್ತು ಕೃಷ್ಣ ಹಾಗೂ ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮೀ ಸ್ಥಳೀಯ ಸೇವಾಪ್ರತಿನಿಧಿ ಶ್ರೀಮತಿ ಶಶಿಕಲಾ ರವರು ಉಪಸ್ಥಿತರಿದ್ದರು.













Leave a Reply