ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ದೇಗುದ ವತಿಯಿಂದ ನಡೆಸಲ್ಪಡುವ ಶ್ರೀ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮೇಳದ ಈ ವರ್ಷದ ತಿರುಗಾಟದ ಪ್ರಥಮ ದೇವರ ಸೇವೆ ಆಟ ಇದೇ ಬರುವ ನ.17ರಂದು ಶ್ರೀ ದೇಗುಲದಲ್ಲಿ ಆರಂಭಗೊಳ್ಳಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಮಂಗಳವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆನಂದ ಸಿ ಕುಂದರ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ರತನ್ ಐತಾಳ್ ಕೆ.ಸುಬ್ರಾಯ ಜೋಗಿ, ಎಂ.ಶಿವ ಪೂಜಾರಿ, ಕೆ.ಚಂದ್ರಶೇಖರ್ ಆಚಾರ್, ಗಣೇಶ ನೆಲ್ಲಿಬೆಟ್ಟು, ಸುಭಾಸ್ ಶೆಟ್ಟಿ, ಸುಧಾ ಪೂಜಾರಿ, ಜ್ಯೋತಿ ದೇವದಾಸ್ ಕಾಂಚನ್, ಮಾಜಿ ಟ್ರಸ್ಟಿ ಚಂದ್ರ ಪೂಜಾರಿ, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ, ಅರ್ಚಕ ಪ್ರತಿನಿಧಿಗಳು,ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಕೋಟ ಅಮೃತೇಶ್ವರೀ ಮೇಳ ತಿರುಗಾಟ ಆರಂಭದ ಹಿನ್ನಲ್ಲೆಯಲ್ಲಿ ಪ್ರಥಮ ದೇವರ ಸೇವೆ ಆಟದ ಅಮಂತ್ರಣ ಪತ್ರಿಕೆಯನ್ನು ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆನಂದ ಸಿ ಕುಂದರ್ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಸಮಿತಿಯ ಸದಸ್ಯರಾದ ರತನ್ ಐತಾಳ್ ಕೆ.ಸುಬ್ರಾಯ ಜೋಗಿ, ಎಂ.ಶಿವ ಪೂಜಾರಿ, ಕೆ.ಚಂದ್ರಶೇಖರ್ ಆಚಾರ್, ಗಣೇಶ ನೆಲ್ಲಿಬೆಟ್ಟು, ಸುಭಾಸ್ ಶೆಟ್ಟಿ ಇದ್ದರು.















Leave a Reply