ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ನಲ್ಲಿ ವಿಕಲ ಚೇತನರ ಸಭೆಯು ಕೋಟತಟ್ಟು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ ಕೆ. ಸತೀಶ್ ಕುಂದರ್ ಬಾರಿಕೆರೆ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಈ ವೇಳೆ ಮಾತನಾಡಿದ ಅವರು ವಿಕಲಚೇತನರು ಯಾವ ರೀತಿಯಲ್ಲೂ ಇತರರಿಗೆ ಕಡಿಮೆ ಸಾಮರ್ಥ್ಯ ಹೊಂದಿಲ್ಲ ಸರಕಾರದ ಸೌಲಭ್ಯವನ್ನು ಸಮರ್ಪಕವಾಗಿ ಸದುಪಯೋಗ ಪಡೆಯಲು ಸೂಚಿಸಿದರು. ವಿಕಲ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಡುಪಿ ತಾಲೂಕು ಸಂಯೋಜಕ ಮಧುಸೂದನ್ ಅವರು ಮಾಹಿತಿ ನೀಡಿದರು. ಇದೇ ವೇಳೆ ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲ ಚೇತನರ ವೈದ್ಯಕೀಯ ನೆರವಿಗೆ ಸಹಾಯ ಧನದ ಚೆಕ್ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ವಿದ್ಯಾ, ಅಶ್ವಿನಿ, ಸೀತಾ, ಆಶಾ ಕಾರ್ಯಕರ್ತೆಯರು, ವಿಕಲಚೇತನ ಫಲಾನುಭವಿಗಳು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಅವರು ನಿರೂಪಿಸಿದರು ಹಾಗೂ ಕಾರ್ಯದರ್ಶಿ ಸುಮತಿ ಅಂಚನ್ ವಂದಿಸಿದರು.
ಕೋಟತಟ್ಟು ಗ್ರಾಮ ಪಂಚಾಯತ್ನಲ್ಲಿ ವಿಕಲ ಚೇತನರ ಸಭೆಯು ಕೋಟತಟ್ಟು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ ಕೆ. ಸತೀಶ್ ಕುಂದರ್ ಬಾರಿಕೆರೆ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಉಪಾಧ್ಯಕ್ಷರಾದ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ವಿದ್ಯಾ, ಅಶ್ವಿನಿ, ಸೀತಾ ಇದ್ದರು.















Leave a Reply