ಕೋಟ: ಉಡುಪಿ ಅಮೃತ ಗಾರ್ಡನ್ ನಲ್ಲಿ ಇತ್ತೀಚಿಗೆ ನಡೆದ ಹಂಶಿ ಪ್ರವೀಣಕುಮಾರ ಸ್ಮರಣಾರ್ಥ ಮಲ್ಪೆ ಡೋಜೋ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ?ಯಂಡ್ ಅಲೈಡ್ ಆರ್ಟ್ಸ್ ಆಯೋಜಿಸಿದ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಾಸ್ತಾನ ಸೈಂಟ್ ಅಂತೋನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳಾದ ಆಧ್ಯ ಎಸ್ ಪೂಜಾರಿ, ಉತ್ತಮ ಪೈ, ಮೊಹಮದ್ ಅಲೆಕ್, ರಂಜನ್ ಜೆ ಪೂಜಾರಿ , ಆಯಿರಾನಾಜ್, ಸ್ಪಂದನ ಚಡಗ , ಜೇಶೋನ್ ಮಾರ್ಟಿನ್ ರೊಡ್ರಿಗಸ್, ಯಶಸ್ , ಅಬ್ದುಲ್ ಮುಖ್ವಿತ್, ತನಿಷ್ಕ, ಪ್ರಥಮ ಎನ್ ಖಾರ್ವಿ , ಪ್ರಹ್ಲಾದ ಮೈಯ, ರೋಲ್ವಿನ್ ಡಿಸೋಜ ಚಿನ್ನ ಬೆಳ್ಳಿ ಕಂಚಿನ ಪದಕಗಳಿಸಿದರು. ಸಹಕರಿಸಿದ ಶಾಲಾ ಸಂಚಾಲಕರಾದ ಫಾ| ಸುನಿಲ್ ಡಿಸಿಲ್ವ – ಮುಖ್ಯೋಪಾಧ್ಯಾಯ ಅನಿತಾ ಅಲ್ಮೆಡಾ ದೈಹಿಕ ಶಿಕ್ಷಕರಾದ ಉಮಾನಾಥ್ ಹಾಗೂ ಕರಾಟೆ ಶಿಕ್ಷಕರಾದ ಜಗನ್ನಾಥ್ ಅಮೀನ್ ಉಪಸ್ಥಿತರಿದ್ದರು.
ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ















Leave a Reply