
ಕೋಟ: ‘ಮಕ್ಕಳು ನಮ್ಮ ಜೀವನದ ದೊಡ್ಡ ಆಸ್ತಿ ಅವರ ಶಿಕ್ಷಣ, ಪ್ರತಿಭೆ, ಯೋಚನೆ, ಮೊದಲಾದವುಳಿಗೆ ಸೂಕ್ತ ಮಾರ್ಗದರ್ಶನಗಳ ಅಗತ್ಯವಿದೆ’ ಎಂದು ಸಂಸ್ಕೃತಿಕ ಚಿಂತಕರಾದ ವೆಂಕಟೇಶ್ ಭಟ್ ನುಡಿದರು. ಅವರು ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ, ಉಸಿರು ಕೋಟ. ಇವರ ಆಸರೆಯಲ್ಲಿ ನಡೆದ 24ನೇ ವರ್ಷದ ಮಕ್ಕಳ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಆರಂಭಿಕ ಮಾತುಗಳನ್ನ ಆಡಿದ ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟೇಶ ಉಡುಪರು ಮಕ್ಕಳ ದಿನಾಚರಣೆಯ ಮಹತ್ವ ಮತ್ತು ಉದ್ದೇಶ ಶಾಲೆ ಮತ್ತು ಪೋಷಕರ ಸಂಬಂಧ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು ಬಳಿಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ವಿವಿಧ ಸ್ಪರ್ಧೆಗಳು ನಡೆದವು ಶಾಲಾ ವಿದ್ಯಾರ್ಥಿ ನಾಯಕಿ ಇಂಪನ ಸ್ವಾಗತಿಸಿದರೆ ಉಪನಾಯಕಿ ಪ್ರಿಯ ಧನ್ಯವಾದ ನೀಡಿದಳು . ಕುಮಾರಿಯರಾದ ಪಂಚಮಿ, ಸಾನ್ವಿ, ರಶ್ಮಿತಾ, ದೀಪಿಕಾ, ಕಾರ್ಯಕ್ರಮಗಳನ್ನು ಸಂಘಟಿಸಿದ್ದರು












Leave a Reply