ಉಡುಪಿ ಗುಂಡಿಬೈಲು ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಆದಿವುಡುಪಿ ಕನ್ನಡ ಮತ್ತು ಆಂಗ್ಲಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಒಟ್ಟು 50 ಬಹುಮಾನಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಆದಿವುಡುಪಿ ಹಿರಿಯ ಪ್ರಾಥಮಿಕ ಶಾಲೆಯ 3 ವಿದ್ಯಾರ್ಥಿಗಳು ಪ್ರಥಮ, 4 ವಿದ್ಯಾರ್ಥಿಗಳು ದ್ವಿತೀಯ, 8 ವಿದ್ಯಾರ್ಥಿಗಳು ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಪ್ರೌಢಶಾಲೆಯ 3 ವಿದ್ಯಾರ್ಥಿಗಳು ಪ್ರಥಮ, 2 ವಿದ್ಯಾರ್ಥಿಗಳು ದ್ವಿತೀಯ, ಒಬ್ಬ ವಿದ್ಯಾರ್ಥಿ ತೃತೀಯ ಬಹುಮಾನ ಗಳಿಸಿದ್ದಾರೆ. ಆಂಗ್ಲಮಾಧ್ಯಮ ಶಾಲೆಯ 7 ವಿದ್ಯಾರ್ಥಿಗಳು ಪ್ರಥಮ, 9 ವಿದ್ಯಾರ್ಥಿಗಳು ದ್ವಿತೀಯ, 13 ವಿದ್ಯಾರ್ಥಿಗಳು ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಬಹುಮಾನ ವಿಜೇತ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಅಭಿನಂದಿಸಲಾಯಿತು. ಶಿಕ್ಷಣ ಸಮಿತಿಯ ಜಂಟಿ ಕಾರ್ಯದರ್ಶಿ ಗುರುರಾಜ್ ರಾವ್, ಆದಿವುಡುಪಿ ಆಂಗ್ಲಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಮಧು ಜಿ. ರಾವ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಅಕ್ಷತಾ ಎಸ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಭಾಗ್ಯಶ್ರೀ ಕಂಬಳಕಟ್ಟ, ಶಿಕ್ಷಕಿಯರಾದ ಗೀತಾ ಕುಮಾರಿ, ಪವಿತ್ರ, ದೀಕ್ಷಿತಾ, ಪ್ರೇಮ, ಸುಪ್ರಿಯಾ, ಆಶ್ವೀಜಾ, ಶಮಿತಾ ಕುಲಾಲ್, ಶಿಕ್ಷಕ ಸುಮಂತ್ ಉಪಸ್ಥಿತರಿದ್ದರು.














Leave a Reply