ಕೋಟ: ಇತ್ತೀಚಿಗೆ ಉಡುಪಿ ಬುಡುಕೋನ್ ಸ್ಪೋರ್ಟ್ ಕರಾಟೆ ಕರ್ನಾಟಕ ಇವರು ನಡೆಸಿದ 22 ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ 2025 ಮುಕಿನ್ ಕಯ್ ಕರಾಟೆ ದೋ ಫೆಡರೇಷನ್ ಆಫ್ ಇಂಡಿಯಾ ಇದರಲ್ಲಿ ಕೋಟ ಮಣೂರು ಪಡುಕೆರೆ ನಿವಾಸಿ ಪ್ರೇರಣಾ ಮೊಗವೀರ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಮತ್ತು ಕುಮಿಟೆ ವಿಭಾಗದಲ್ಲಿ ತೃತಿಯ ಸ್ಥಾನ ಪಡೆದುಕೊಂಡರು.
ಇವರಿಗೆ ಏಷ್ಯಾನ್ ಕರಾಟೆ ಹಾಗೂ ಕರಾಟೆ ಬುಡುಕೋನ್ ಇಂಡಿಯಾ ಮುಖ್ಯ ತರಬೇತುದಾರ ಪರಮೇಶ್ವರ ಟ್ರೋಫಿ, ಮೆಡಲ್, ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಿದರು. ಮುಖ್ಯ ತರಬೇತುದಾರರಾಗಿ ಸೆನ್ಸಾಯಿ ಮಂಜುನಾಥ್ ಎಂ ಮೊಗವೀರವರು ತರಬೇತಿ ನೀಡಿದ್ದಾರೆ. ಈಕೆ ಕೋಟ ಮಣೂರು ಪಡುಕರೆ ಪ್ರೇಮ ನಾಗೇಶ್ ಮೊಗವೀರ ದಂಪತಿಗಳ ಪುತ್ರಿಯಾಗಿದ್ದಾರೆ.















Leave a Reply