Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಚಿಕ್ಕಮಗಳೂರು ರಾಜಕೀಯದಲ್ಲಿ ಯುವಶಕ್ತಿ ಮತ್ತು ಸಮರ್ಥ ತಂತ್ರಗಾರಿಕೆಯ ವಿಜಯೋತ್ಸವ

ವರದಿ : ಪುರುಷೋತ್ತಮ್ ಪೂಜಾರಿ

ಚಿಕ್ಕಮಗಳೂರು ಜಿಲ್ಲೆಯ ರಾಜಕೀಯವು ಹೊಸ ದಿಕ್ಸೂಚಿಯತ್ತ ಮುಖ ಮಾಡಿದ್ದು ಇತ್ತೀಚಿನ ಚುನಾವಣಾ ಫಲಿತಾಂಶಗಳು. ಸಿ ಎಸ್ ಸಿದ್ದೇಗೌಡ ನೇತೃತ್ವದಲ್ಲಿ ಹಿರಿಯ ಕಿರಿಯ ನಾಯಕರು ಮತ್ತು ಕಾರ್ಯಕರ್ತರ ತಂತ್ರಗಾರಿಕೆಯ ಯಶಸ್ಸು ಸಾರುತ್ತಿದೆ ಅನುಭವ ಮತ್ತು ಯುವ ಉತ್ಸಾಹದ ಈ ಸಮನ್ವಯವೂ ಜಿಲ್ಲೆಯ ರಾಜಕೀಯ ಚಿತ್ರಣದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ.

ವಿಜಯದ ಮಾಲೆ ತೊಟ್ಟ ಯುವ ಮತ್ತು ಸಮರ್ಥ ನಾಯಕರು ಸಿದ್ದೇಗೌಡರ ಮಾರ್ಗದರ್ಶನ ಹಾಗೂ ನಾಯಕರ ಕಾರ್ಯಕರ್ತರ ಒಗ್ಗಟ್ಟಿನ ಶ್ರಮವು ಯುವ ಜನತೆಯ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿದೆ. ಈ ತಂತ್ರಗಾರಿಕೆಯ ಫಲವಾಗಿ. ಯುವ ಮತ್ತು ಸಶಕ್ತ ನಾಯಕರು ವಿಜಯಶಾಲಿಯಾಗಿದ್ದಾರೆ.

ಚಿಕ್ಕಮಗಳೂರು ಮಧುಕುಮಾರ್ ರಾಜ್ ಅರಸ್. ಯುವ ಜನಪ್ರಿಯ ನಾಯಕರಾಗಿ ಹೊರಹೊಮ್ಮಿರುವ ಇವರು ತಮ್ಮ ವಿಜಯದ ಮೂಲಕ ಯುವ ಪೀಳಿಗೆಯ ಆಶೋತ್ತರಗಳನ್ನು ಪ್ರತಿನಿಧಿಸಿದ್ದಾರೆ ಹೊಸತನ ಮತ್ತು ಅಭಿವೃದ್ಧಿಯ ನಿರೀಕ್ಷೆಗಳು ಇವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ ಅಜ್ಜಂಪುರ ಪಟ್ಟಣ ಪಂಚಾಯತ್ ಸ್ಥಳೀಯ ಮಟ್ಟದಲ್ಲಿ ದೃಢವಾದ ನೆಲೆಯನ್ನು ಹೊಂದಿರುವ ರಂಗಸ್ವಾಮಿಯವರ ಗೆಲುವು. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ಜನಮನವನ್ನು ತಲುಪುವಲ್ಲಿ ನಾಯಕತ್ವದ ಯಶಸ್ಸು ವನ್ನು ತೋರಿಸುತ್ತದೆ.

ತರಿಕೆರೆ ಟಿ.ಎಂ ಭೋಜರಾಜ್  ಅವರ ಗೆಲುವು ಕೂಡ ಸಂಘಟಿತ ಪ್ರಯತ್ನ ಮತ್ತು ಸರಿಯಾದ ಸ್ಥಳೀಯ ತಂತ್ರಗಾರಿಕೆಗೆ ಸಿಕ್ಕ ಪ್ರತಿಫಲವಾಗಿದೆ ಇವರ ವಿಜಯವು ಆಯಾ ಪ್ರದೇಶಗಳ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮತ್ತು ಪರಿಹಾರ ಒದಗಿಸುವ ಸಾಮರ್ಥ್ಯಕ್ಕೆ ಸಂದ ಜಯವಾಗಿದೆ.

ಯಶಸ್ವಿನ  ಹಿಂದಿನ  ತಂತ್ರಗಾರಿಕೆ ಈ ವಿಜಯವು ಕೇವಲ ವ್ಯಕ್ತಿಗಳ ಗೆಲುವಲ್ಲ. ಇದು ಸಿ ಆರ್ ಸಿದ್ದೇಗೌಡರ ದಕ್ಷ ಸಂಘಟನಾ ಚಾತುರ್ಯ. ಅನುಭವಿ ಹಿರಿಯ ನಾಯಕರ ಮಾರ್ಗದರ್ಶನ ಮತ್ತು ಪ್ರತಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿದ ಕಿರಿಯ ಕಾರ್ಯಕರ್ತರ ಆಚಲ ನಿಷ್ಠೆಗೆ ದೊರೆತ ಫಲ ಒಗ್ಗಟ್ಟಿನ ಮಂತ್ರ ಹಿರಿಯರು ತಮ್ಮ ಅನುಭವವನ್ನು ಹಂಚಿದ್ದಾರೆ , ಕಿರಿಯರು ಅದನ್ನು ಹೊಸ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿದರು ಯುವಜನರ ಒಲವು. ಯುವ ನಾಯಕರನ್ನು ಮುಂಚೂಣಿಗೆ ತಂದಿರುವುದು ಜಿಲ್ಲೆಯ ಯುವ ಮತದಾರರನ್ನು ಹೆಚ್ಚು ಆಕರ್ಷಿಸಿ ಅವರನ್ನು ರಾಜಕೀಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿದೆ.

ಈ ಫಲಿತಾಂಶಗಳು ಚಿಕ್ಕಮಗಳೂರು ರಾಜಕೀಯದಲ್ಲಿ ಒಂದು ಪೀಳಿಗೆಯ ಬದಲಾವಣೆ ಮತ್ತು ಸಮಗ್ರ ನಾಯಕತ್ವದ ಉದಯವನ್ನು ಸೂಚಿಸುತ್ತದೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿ ಮತ್ತು ರಾಜಕೀಯ ಸಮೀಕರಣಗಳಲ್ಲಿ ಮಹತ್ವದ ಪಾತ್ರವಹಿಸಲಿವೆ ಎಂಬುದರಲ್ಲಿ ಸಂದೇಹವಿಲ್ಲ. ಬೇರೆ ಬೇರೆ ಪಕ್ಷದ ಮತದಾನ ಅರ್ಹರು ಅಭ್ಯರ್ಥಿಯ ಆಯ್ಕೆಯಲ್ಲಿ ಅವರ ಆಯ್ಕೆ ತಿಳಿಸಿರುವುದು ಮುಂದಿನ ಚಟುವಟಿಕೆಗೆ  ಗಾಮನರ್ಹ ವಿಚಾರವಾಗಿದೆ ಇದು ಸರ್ವರೂ ಒಂದಾಗಿ  ಸಂಘಟಿತ ಹೋರಾಟದ ಫಲವೇ ಗೆಲುವಾಗಿದೆ ಎಂದು  ಸಿ.ಎಸ್.ಸಿದ್ದೇಗೌಡರು  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.

Leave a Reply

Your email address will not be published. Required fields are marked *