ಕೋಟ: ಕೋಡಿ ಕನ್ಯಾನ ಶ್ರೀ ಶನೀಶ್ವರ ದೇವಸ್ಥಾನ ವಠಾರದಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ಉಂಜಲೋತ್ಸವ ಸಹಿತ ಪುಷ್ಪಯಾಗ ಮಹೋತ್ಸವ ಡಿ.21ರಂದು ನಡೆಯಲಿದ್ದು ಈ ಪ್ರಯುಕ್ತ ಚಪ್ಪರ ಮುಹೂರ್ತ ಡಿ.6 ರಂದು ಕೋಡಿಯಲ್ಲಿ ನೆರವೇರಿತು.
ಸ್ಥಳೀಯ ಗಣ್ಯರಾದ ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಉದ್ಯಮಿ ಶಿವ ಎಸ್. ಕರ್ಕೇರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಆನಂದ ಸಿ.ಕುಂದರ್ ಮಾತನಾಡಿ ತಿರುಮಲ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟ್ನ ಕಾಠ್ಯಕ್ರಮದಲ್ಲಿ ಟಿಟಿಡಿ ದೇವಸ್ಥಾನದ ವಿಶೇಷ ಅಧಿಕಾರಿ ವಿದ್ವಾನ್ ಆನಂದ ತೀರ್ಥಚಾರ್ ಪಗಾಡಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು ಹೆಮ್ಮೆಯ ವಿಚಾರವಾಗಿದೆ. ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವಿರಲಿ ಎಂದರು. ಸ್ಥಳೀಯ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.
ಕನ್ಯಾನ ಶ್ರೀ ಶನೀಶ್ವರ ದೇವಸ್ಥಾನ ವಠಾರದಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ಉಂಜಲೋತ್ಸವ ಸಹಿತ ಪುಷ್ಪಯಾಗ ಮಹೋತ್ಸವದ ಚಪ್ಪರ ಮುಹೂರ್ತ ಡಿ.6 ರಂದು ಕೋಡಿಯಲ್ಲಿ ನೆರವೇರಿತು. ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ.ಕುಂದರ್, ಉದ್ಯಮಿ ಶಿವ ಎಸ್. ಕರ್ಕೇರ ಇದ್ದರು.















Leave a Reply