ಕೋಟ: ಸ್ವಚ್ಛತಾ ಅಭಿಯಾನಗಳು ಸಂಘಟನೆಗಳಿಗೆ ಸೀಮಿತವಾಗದೆ ಪ್ರತಿ ಮನೆ ಮನಗಳನ್ನು ತಲುಪಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಭಾನುವಾರ ಶ್ರೀರಾಮ ಗೆಳೆಯರ ಬಳಗ ಕೋಡಿ ಕನ್ಯಾಣ ಇವರ ಆಶ್ರಯದಲ್ಲಿ ನಮ್ಮಕಡಲು ನಮ್ಮಜವಾಬ್ದಾರಿ ಎಂ ಶೀರ್ಷಿಕೆಯಡಿ ಕೋಡಿ ಕನ್ಯಾಣ ಬೀಚ್ ಕ್ಲಿನಿಂಗ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಯುವ ಸಮುದಾಯ ಪ್ರತಿ ಹೆಜ್ಜೆಗೂ ಜಾಗೃತಿ ಮೊಳಗಿಸಿ ತ್ಯಾಜ್ಯ ಮುಕ್ತ,ವ್ಯಾಜ್ಯ,ವ್ಯಸನ ಮುಕ್ತ ಸ್ವಸ್ಥ ಸಮಾಜಕ್ಕೆ ಮುನ್ನುಡಿ ಬರೆಯಲಿ ಎಂದು ಹಾರೈಸಿದರು.
ಈ ಸಂದರ್ಭಗಳಲ್ಲಿ ಕೋಡಿ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪುನೀತ್ ಪೂಜಾರಿ, ಉಪಾಧ್ಯಕ್ಷ ಯಾದವ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಂದರ್, ಜೊತೆಗೆ ಕಾರ್ಯದರ್ಶಿ ದರ್ಶನ್ ಕಾಂಚನ್, ನಿಖಿಲ್ ಖಾರ್ವಿ ಹಾಗೂ ಸಂಘದ ಎಲ್ಲಾ ಸದಸ್ಯರು, ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಸದಸ್ಯರಾದ ಕೃಷ್ಣ ಪೂಜಾರಿ ,ಕೋಡಿ ಪರಿಸರದ ಅಂಗನವಾಡಿ ಹಾಗೂ ಶಿಶುಮಂದಿರದ ಮಾತೆಯರು, ವಾಮನ್ ಡಿ ಸಾಲಿಯಾನ್, ಭೋಜ ಖಾರ್ವಿ, ರಾಮ ಖಾರ್ವಿ, ಸುರೇಶ್ ಖಾರ್ವಿ, ಗಣಪ ಪೂಜಾರಿ ಇದ್ದರು.
.ಶ್ರೀರಾಮ ಗೆಳೆಯರ ಬಳಗ ಕೋಡಿ ಕನ್ಯಾಣ ಇವರ ಆಶ್ರಯದಲ್ಲಿ ನಮ್ಮಕಡಲು ನಮ್ಮಜವಾಬ್ದಾರಿ ಎಂ ಶೀರ್ಷಿಕೆಯಡಿ ಕೋಡಿ ಕನ್ಯಾಣ ಬೀಚ್ ಕ್ಲಿನಿಂಗ್ ಕಾರ್ಯಕ್ರಮಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಕೋಡಿ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪುನೀತ್ ಪೂಜಾರಿ, ಉಪಾಧ್ಯಕ್ಷ ಯಾದವ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಂದರ್, ಜೊತೆಗೆ ಕಾರ್ಯದರ್ಶಿ ದರ್ಶನ್ ಕಾಂಚನ್, ನಿಖಿಲ್ ಖಾರ್ವಿ ಹಾಗೂ ಸಂಘದ ಎಲ್ಲಾ ಸದಸ್ಯರು, ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಸದಸ್ಯರಾದ ಕೃಷ್ಣ ಪೂಜಾರಿ ಇದ್ದರು.















Leave a Reply