ಕೋಟ: ಆನೆಗುಡ್ಡೆಯಲ್ಲಿ ಗಣೇಶ ಕೃಪ ಭೋಜನ ಶಾಲೆಯ ಪ್ರವೇಶ ದ್ವಾರದ ಬಳಿ ಅಂದಾಜು ರೂ 3 ಲಕ್ಷದಲ್ಲಿ 10 ಅಡಿ ಎತ್ತರದ ನೂತನವಾಗಿ ನಿರ್ಮಾಣವಾದ ಶ್ರೀ ವಿನಾಯಕನ ಬಿತ್ತಿ ಶಿಲ್ಪವನ್ನು ದೇವರಿಗೆ ಸಮರ್ಪಿಸಲಾಯಿತು.
ಶ್ರೀದೇವಳದ ದಾನಿಗಳಲ್ಲಿ ದಿವಂಗತ ಕೋಟೇಶ್ವರ ಸೂರ್ಯನಾರಾಯಣ ರಾವ್ ಸ್ಮರಣಾರ್ಥ ಇವರ ಸುಪುತ್ರರಾದ ಸುರೇಶ್ ಭಟ್ ಹಾಗೂ ರೇವತಿ ಸುರೇಶ್ ಭಟ್ ಇವರಿಂದ ಅಧಿಕೃತವಾಗಿ ಸಮರ್ಪಿಸಲಾಯಿತು.
ವೇದಮೂರ್ತಿ ಹೂವಿನಕೆರೆ ವಾದೀಶ ಭಟ್, ನೇರಂಬಳ್ಳಿ ಪ್ರಾಣೇಶ ತಂತ್ರಿ ಹಾಗೂ ಕೆ ಕೆ.ಸುಬ್ರಮಣ್ಯ ಉಪಾಧ್ಯಾಯ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀರಮಣ ಉಪಾಧ್ಯಾಯ ದಾನಿಗಳಿಗೆ ದೇವಳದ ವತಿಯಿಂದ ವಿಶೇಷವಾಗಿ ಗೌರವಿಸಿ ಪ್ರಸಾದವನ್ನು ನೀಡಿದರು.
ವಿಶ್ರಾಂತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದಶಿಗಳಾದ ನಿರಂಜನ ಉಪಾಧ್ಯಾಯ , ಪದ್ಮನಾಭ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಹಾಗೂ ಸಹೋದರರು, ದೇವಸ್ಥಾನದ ಪ್ರಬಂಧಕರಾದ ನಟೇಶ್ ಕಾರಂತ್ ಹಾಗೂ ಸಿಬ್ಬಂದಿಗಳು ಹಾಗೂ ದಿವಂಗತ ಕೋಟೇಶ್ವರ ಸೂರ್ಯನಾರಾಯಣ ರಾವ್ ಕುಟುಂಬಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.
ಆನೆಗುಡ್ಡೆಯಲ್ಲಿ ಗಣೇಶ ಕೃಪ ಭೋಜನ ಶಾಲೆಯ ಪ್ರವೇಶ ದ್ವಾರದ ಬಳಿ ಅಂದಾಜು ರೂ 3 ಲಕ್ಷದಲ್ಲಿ 10 ಅಡಿ ಎತ್ತರದ ನೂತನವಾಗಿ ನಿರ್ಮಾಣವಾದ ಶ್ರೀ ವಿನಾಯಕನ ಬಿತ್ತಿ ಶಿಲ್ಪವನ್ನು ದೇವರಿಗೆ ಸಮರ್ಪಿಸಲಾಯಿತು.















Leave a Reply