ಕೋಟ: ಸ್ನೇಹಕೂಟ ಮಣೂರು ಇದರ ದಶಮಾನೋತ್ಸವ ಅಂಗವಾಗಿ ಇದೇ ಬರುವ ಡಿ.25ರಂದು ಮಣೂರು ಪರಿಸರದಲ್ಲಿ ನಡೆಯಲಿರುವ ಊರ್ಮನಿ ಹಬ್ಬ 2025ರ ಪ್ರಯುಕ್ತ ಮಣೂರು ಗ್ರಾಮದ ಮಹಿಳೆಯರಿಗಾಗಿ ಕ್ರೀಡೋತ್ಸವವನ್ನು ಭಾನುವಾರ ಮಣೂರು ಮಹಾಲಿಂಗೇಶ್ವರ ಸಭಾಭವನದಲ್ಲಿ ಆಯೋಜಿಸಲಾಯಿತು.
ಮಣೂರು ಶ್ರೀರಾಮ ಪ್ರಸಾದ ಅಂಗನವಾಡಿಯ ಶಿಕ್ಷಕಿ ನಿರ್ಮಲ ಉರಾಳ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಣೂರು ಸ್ನೇಹಕೂಟ ಪ್ರಧಾನ ಸಂಚಾಲಕಿ ಭಾರತಿ ವಿ ಮಯ್ಯ ಕ್ರೀಡೋತ್ಸವದ ಬಗ್ಗೆ ಮಹಿಳೆಯರಿಗೆ ಮಾಹಿತಿಯನ್ನು ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳೆಯರಿಂದ ವಿವಿಧ ಗ್ರಾಮೀಣ ಕ್ರೀಡೆಗಳು ಜರಗಿದವು ಸ್ನೇಹಕೂಟದ ವನಿತಾ ಉಪಾಧ್ಯ , ಸ್ಮಿತಾ ರಾಣಿ ಮತ್ತಿತರರು ಇದ್ದರು. ಸದಸ್ಯರಾದ ವಿನಯಾ, ಶುಭ ಅಡಿಗ ಸಹಕರಿಸಿದರು
ಗುಣವತಿ ವಂದಿಸಿದರು.
ಸ್ನೇಹಕೂಟ ಮಣೂರು ಇದರ ದಶಮಾನೋತ್ಸವ ಅಂಗವಾಗಿ ಊರ್ಮನಿ ಹಬ್ಬ ಪ್ರಯುಕ್ತ ಗ್ರಾಮೀಣ ಮಹಿಳೆಯರಿಗಾಗಿ ಕ್ರೀಡೋತ್ಸವವನ್ನು ಮಣೂರು ಶ್ರೀರಾಮ ಪ್ರಸಾದ ಅಂಗನವಾಡಿಯ ಶಿಕ್ಷಕಿ ನಿರ್ಮಲ ಉರಾಳ ಉದ್ಘಾಟಿಸಿದರು. ಮಣೂರು ಸ್ನೇಹಕೂಟ ಪ್ರಧಾನ ಸಂಚಾಲಕಿ ಭಾರತಿ ವಿ ಮಯ್ಯ ಮತ್ತಿತರರು ಇದ್ದರು.















Leave a Reply