ಕೋಟ: ಇಲ್ಲಿನ ಕೋಟದ ಮೂಡುಗಿಳಿಯಾರು ಹೊನ್ನಾರಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದಡಿ ಅನ್ನ ಪ್ರಶಾನ ಕಾರ್ಯಕ್ರಮ ಇತ್ತಿಚಿಗೆ ಜರಗಿತು.
ಕಾರ್ಯಕ್ರಮವನ್ನು ಕೋಟ ಗಿಳಿಯಾರಿನ ಹಿರಿಯ ನಾಗರೀಕ ವೇದಿಕೆಯ ಅಧ್ಯಕ್ಷ , ರಾಷ್ಟ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಧ್ಯಾಯ ಹಂದಕುoದ ಸೋಮಶೇಖರ ಶೆಟ್ಟಿ ಮಕ್ಕಳಿಗೆ ಆಹಾರ ಪದ್ದತಿ ಹಾಗೂ ಅವರ ಅರೋಗ್ಯದ ಕುರಿತು ಮಾಹಿತಿ ನೀಡಿ ಅನ್ನಪ್ರಾಶನಕ್ಕೆ ಚಾಲನೆ ನೀಡಿ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕ ವೇದಿಕೆಯ ಪದಾಧಿಕಾರಿಗಳಾದ ಕೆ. ರಾಜಾರಾಮ್ ಶೆಟ್ಟಿ. ಜಿ ಮಹಾಬಲ ಹೆರ್ಳೆ. ಜಿ.ಶಂಕರ ಆಚಾರ್. ಜಿ ಸುಬ್ರಹ್ಮಣ್ಯ ಹೆರ್ಳೆ. ಜಿ ಕೃಷ್ಣ ಯ್ಯ ಆಚಾರ್, ಸ್ಥಳೀಯರಾದ ಕೊಗ್ಗ ಆಚಾರ್ ಹಾಗೂ ಸರ್ವಾಜನಿಕರು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಗಂಗಾ ಸ್ವಗತಿಸಿದರು. ವಿಭಾ ವಂದಿಸಿದರು.
ಮೂಡುಗಿಳಿಯರಿನ ಹೊನ್ನಾರಿ ಅಂಗನವಾಡಿ ಕೇಂದ್ರದಲ್ಲಿ ಅನ್ನಪ್ರಾಶನ ಕಾರ್ಯಕ್ರಮಕ್ಕೆ ಗಿಳಿಯಾರಿನ ಹಿರಿಯ ನಾಗರೀಕ ವೇದಿಕೆಯ ಅಧ್ಯಕ್ಷ ರಾಷ್ಟ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಧ್ಯಾಯ ಹಂದಕುoದ ಸೋಮಶೇಖರ ಶೆಟ್ಟಿ ಚಾಲನೆ ನೀಡಿದರು. ಹಿರಿಯ ನಾಗರಿಕ ವೇದಿಕೆಯ ಪದಾಧಿಕಾರಿಗಳಾದ ಕೆ. ರಾಜಾರಾಮ್ ಶೆಟ್ಟಿ. ಜಿ ಮಹಾಬಲ ಹೆರ್ಳೆ. ಜಿ.ಶಂಕರ ಆಚಾರ್. ಜಿ ಸುಬ್ರಮಣ್ಯ ಹೆರ್ಳೆ. ಜಿ ಕೃಷ್ಣ ಯ್ಯ ಆಚಾರ್ ಇದ್ದರು.















Leave a Reply