ಕೋಟ: ಇಲ್ಲಿನ ಕೋಟದ ಜನತಾ ಸಮೂಹ ಸಂಸ್ಥೆಯ ಆವರಣದಲ್ಲಿ ಕೋಟ ಅಮ್ರತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ದಶವತಾರ ಮೇಳದಿಂದ ರಂಗನಾಯಕಿ ಎನ್ನುವ ಯಕ್ಷಗಾನ ಪ್ರದರ್ಶನ ಹಾಗೂ ಅಭಿನಂದನಾ ಸಮಾರಂಭ ಜರಗಿತು.
ಮೇಳದ ವ್ಯವಸ್ಥಾಪಕ ಹಾಗೂ ಪ್ರಧಾನ ಕಲಾವಿದರಾದ ಇತ್ತೀಚಿಗೆ ಕರ್ನಾಟಕ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ ಬಂಗೇರ ಅವರನ್ನು ಅಭಿನಂದಿಸಲಾಯಿತು. ಅಭಿನಂದಿಸಿ ಮಾತನಾಡಿದ ಅಮೃತೇಶ್ವರಿ ದೇವಳದ ಧರ್ಮದರ್ಶಿ ಹಾಗೂ ಮೇಳದ ಯಜಮಾನರಾದ ಆನಂದ ಸಿ ಕುಂದರ್ ಯಕ್ಷಗಾನ ಪರಂಪರೆ ಸಾಂಪ್ರದಾಯಕ ಶೈಲಿಯನ್ನು ನಡುತಿಟ್ಟಿಗೆ ಕೊಡುಗೆ ನೀಡುವಲ್ಲಿ ಸುರೇಶ್ ಬಂಗೇರರ ಪಾತ್ರ ಗಣನೀಯವಾದದ್ದು ಇಂತಹ ಕಲಾವಿದರು ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಕಲಾವಿದರನ್ನು ಸೃಷ್ಠಿಸುವಂತ್ತಾಗಲಿ ಎಂದು ಹಾರೈಸಿದರು.
ಜನತಾ ಸಂಸ್ಥೆಯ ನಿರ್ದೇಶಕರಾದ ರಕ್ಷಿತ್.ಎ.ಕುಂದರ್ ಮತ್ತು ವೈಷ್ಣವಿ ಆರ್ ಕುಂದರ್ ದಂಪತಿಗಳನ್ನು ಸೇವೆ ನೀಡಿದ ಪ್ರಯುಕ್ತ ಅಮೃತೇಶ್ವರಿ ದೇವಳದ ಮೇಳದ ಯಜಮಾನರಾದ ಆನಂದ ಸಿ ಕುಂದರ್ ಮತ್ತು ಅವರ ಪತ್ನಿ ಗೀತಾ ಎ ಕುಂದರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶಿವ ಪೂಜಾರಿ, ಸುಭಾಸ್ ಶೆಟ್ಟಿ ಗೌರವಿಸಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಗೀತಾನಂದ ಟ್ರಸ್ಟ್ ನಿರ್ದೇಶಕಿ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಮತ್ತು ಜನತಾ ಸಂಸ್ಥೆಯ ಎ.ಜಿ.ಎಮ್ ಶ್ರೀನಿವಾಸ ಕುಂದರ್ ಮತ್ತು ವ್ಯವಸ್ಥಾಪಕ ಮಿಥುನ ಕುಮಾರ್ ಉಪಸ್ಥಿತರಿದ್ದರು.
ಶ್ರೀನಿವಾಸ ಕುಂದರ್ ಕಾರ್ಯಕ್ರಮ ನಿರ್ವಹಿಸಿ ಮೇಳದ ಮುಖ್ಯ ಭಾಗವತರಾದ ರಾಘವೇಂದ್ರ ಮಯ್ಯ ವಂದಿಸಿದರು.
ಕೋಟದ ಜನತಾ ಸಮೂಹ ಸಂಸ್ಥೆಯ ಆವರಣದಲ್ಲಿ ಕೋಟ ಅಮ್ರತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ದಶವತಾರ ಮೇಳದ ಹರಕೆಯ ಸೇವೆಯಾಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ ಬಂಗೇರ ಅವರನ್ನು ಅಭಿನಂದಿಸಲಾಯಿತು. ಅಮೃತೇಶ್ವರಿ ದೇವಳದ ಧರ್ಮದರ್ಶಿ ಹಾಗೂ ಮೇಳದ ಯಜಮಾನರಾದ ಆನಂದ ಸಿ ಕುಂದರ್, ಜನತಾ ಸಂಸ್ಥೆಯ ನಿರ್ದೇಶಕರಾದ ರಕ್ಷಿತ್.ಎ.ಕುಂದರ್ ಮತ್ತು ವೈಷ್ಣವಿ ಆರ್ ಕುಂದರ್, ಗೀತಾನಂದ ಟ್ರಸ್ಟ್ ನಿರ್ದೇಶಕಿ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಇದ್ದರು.














Leave a Reply