Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ-ಡಾ.ಕಾರಂತದ ವಿಚಾರಧಾರೆ ಯುವ ಜನಾಂಗಕ್ಕೆ ಕೊಂಡ್ಯೊಯಬೇಕಿದೆ- ಜಿ.ರಾಮಚಂದ್ರ ಐತಾಳ್
ಕಾರಂತ ಸೃತಿ ದಿನಾಚರಣೆಯಲ್ಲಿ ಹೇಳಿಕೆ

ಕೋಟ: ಡಾ.ಕೋಟ ಶಿವರಾಮ ಕಾರಂತರ 28ನೇ ಸ್ಮöÈತಿ ದಿನಾಚರಣೆಯನ್ನು ಡಾ. ಕೋಟ ಶಿವರಾಮ ಕಾರಂತ ರಿಸರ್ಚ್ ಮತ್ತು ಸ್ಟಡಿ ಸೆಂಟರ್ ಟ್ರಸ್ಟ್ ಸಾಲಿಗ್ರಾಮ ಹಾಗೂ ಗೆಳೆಯರ ಬಳಗ ಕಾರ್ಕಡ  ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಕಾರಂತ ಸ್ಮತಿ ಚಿತ್ರಶಾಲೆಯಲ್ಲಿ ಡಿ.9 ರಂದು ಆಚರಿಸಲಾಯಿತು.

ಸಂಸ್ಥೆಯ ಕಾರ್ಯನಿರ್ವಹಕ ವಿಶ್ವಸ್ಥ  ಗುಜ್ಜಾಡಿ ಪ್ರಭಾಕರ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶಿವರಾಮ ಕಾರಂತರ ನೆನಪುಗಳು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಬಗ್ಗೆಎಲ್ಲರೂ ಶ್ರಮ ವಹಿಸಬೇಕು ಎಂದು ಕರೆ ನೀಡಿದರು.

ಮುಖ್ಯಅತಿಥಿಯಾಗಿ ಬ್ರಹ್ಮಾವರ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಜಿ. ರಾಮಚಂದ್ರ ಐತಾಳ ಮಾತನಾಡಿ ಕಾರಂತರ ಸಂಸ್ಮರಣೆ ಮಾಡಿ ಜೀವನ ಎನ್ನುವದು ಕರ್ತವ್ಯ. ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವುದು ಕಾರಂತರ ಆಶಯವಾಗಿತ್ತು ಕಾರಂತ ಜೀವನ ಯಶೋಗಾಧೆ ಮರೆಯಲಾಗದ ವಿಶ್ವ ಪುಟಗಳಲ್ಲಿ ಸೇರಿಕೊಂಡಿದೆ ಇಂಥಹ ಮಹಾನ್ ಚೇತನ ಹೆಸರನ್ನು ಇಂದಿನ ಯುವ ಜನಾಂಗಕ್ಕೆ ಈ ಅಧ್ಯಯನ ಕೇಂದ್ರ ದಾರಿದೀಪವಾಗಲಿ ಎಂದು ತಿಳಿಸಿದರು. ಗಣ್ಯರಾದ ಗಣಪ್ಪಯ್ಯ ನಾವುಡ ಕಾರಂತರ ಸಾಮಾಜಿಕ ಕಾಳಜಿಯ ಬಗ್ಗೆ ತಿಳಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ , ಹಂಗಾರಕಟ್ಟೆ ಯಕ್ಷಕಲಾಕೇಂದ್ರದ ಕಾರ್ಯದರ್ಶಿ  ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ಕಾರಂತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಬಿ. ಎಂ . ಗುರುರಾಜ ರಾವ್ ಸ್ವಾಗತಿಸಿದರು.ಕಾರ್ಯದರ್ಶಿ ನಾರಾಯಣ ಆಚಾರ್ಯ ವಂದಿಸಿದರು. ಟ್ರಸ್ಟಿನ  ವಿಶ್ವಸ್ಥರಾದ  ಸಂದೀಪ್ ಶೆಟ್ಟಿ,ಕೆ. ಪಂಜು ಪೂಜಾರಿ, ಉದ್ಯಮಿ  ಮಾಧವ ಪೈ, ಪ್ರಸನ್ನ ಉರಾಳ ಹಾಗೂ ಚಂದ್ರಶೇಖರ ನಾವುಡ, ಪಿ. ಶ್ರೀನಿವಾಸ ಉಪಾಧ್ಯಾ, ಕೆ. ಜಗದೀಶ ಆಚಾರ್ಯ, ಸಂಗೀತಾ ,ರಂಜನಿ ಭಾಗವಹಿಸಿದ್ದರು. ನಂತರ ಯಕ್ಷಗಾನ ಕಲಾ ಕೇಂದ್ರದ ಸಾರಥ್ಯದಲ್ಲಿ ಯಕ್ಷ – ಗಾನವೈಭವ ಜರಗಿತು.

ಡಾ.ಕೋಟ ಶಿವರಾಮ ಕಾರಂತರ 28ನೇ ಸ್ಮತಿ ದಿನಾಚರಣೆಯನ್ನು ಡಾ. ಕೋಟ ಶಿವರಾಮ ಕಾರಂತ ರಿಸರ್ಚ್ ಮತ್ತು ಸ್ಟಡಿ ಸೆಂಟರ್ ಟ್ರಸ್ಟ್ ಸಾಲಿಗ್ರಾಮ ಹಾಗೂ ಗೆಳೆಯರ ಬಳಗ ಕಾರ್ಕಡ  ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಕಾರಂತ ಸ್ಮತಿ ಚಿತ್ರಶಾಲೆಯಲ್ಲಿಬ್ರಹ್ಮಾವರ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಜಿ. ರಾಮಚಂದ್ರ ಐತಾಳ ಮಾತನಾಡಿದರು. ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ , ಹಂಗಾರಕಟ್ಟೆ ಯಕ್ಷಕಲಾಕೇಂದ್ರದ ಕಾರ್ಯದರ್ಶಿ  ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *