ಕೋಟ: ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಕೋಟ ಸಾಲಿಗ್ರಾಮ ಇವರ ಆಶ್ರಯದಲ್ಲಿ,ಶಿವನಾರಾಯಣ ಐತಾಳ್ ಕೋಟ ಇವರ ಕ್ರಿಕೆಟ್ ವೀಕ್ಷಕ ವಿವರಣೆಯಲ್ಲಿ ಸಾರ್ಥಕ 35 ವರ್ಷಗಳ ಸವಿನೆನಪಿಗಾಗಿ ಆಯೋಜಿಸಲಾದ ಶಿವ ಬಿಗ್ ಬ್ಯಾಶ್-2025 ಕ್ರಿಕೆಟ್ ಪಂದ್ಯಾಟಕ್ಕೆ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಕೃಷ್ಣಪ್ರಸಾದ್ ಕೆ.ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಡಾ.ಕೃಷ್ಣಪ್ರಸಾದ್ ರವರು ಕ್ರೀಡಾ ಕ್ಷೇತ್ರಕ್ಕೆ ಶಿವನಾರಾಯಣ ಐತಾಳ್ ಕೊಡುಗೆ ಅಪಾರ.ಹಲವಾರು ವರ್ಷಗಳಿಂದ ವೀಕ್ಷಕ ವಿವರಣೆ ಮತ್ತು ತೀರ್ಪುಗಾರರಾಗಿ ತಮ್ಮನ್ಮು ತೊಡಗಿಸಿಕೊಂಡಿದ್ದು, ತಮ್ಮದೇ ಆದ ಗುಣಮಟ್ಟವನ್ನು ಕಾಯ್ದಕೊಂಡಿದ್ದಾರೆ ಎಂದರು. ವೇದಿಕೆಯಲ್ಲಿ ಸ್ಪೋರ್ಟ್ಸ್ ಕನ್ನಡ ಮುಖ್ಯಸ್ಥ ಕೋಟ ರಾಮಕೃಷ್ಣ ಆಚಾರ್, ಕೆ.ಎಸ್.ಸಿ.ಎ ಅಂಗೀಕೃತ ಅಂಪಾಯರ್ ಇಬ್ರಾಹಿಂ ಆತ್ರಾಡಿ, ಕಾರ್ಯಕ್ರಮ ಸಂಘಟಕ ಶಿವನಾರಾಯಣ ಐತಾಳ್ ಕೋಟ, ಅರವಿಂದ್ ಮಣಿಪಾಲ ಇನ್ನಿತರರು ಉಪಸ್ಥಿತರಿದ್ದರು.
ಫಜಲ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿದರು.
ಸಾಲಿಗ್ರಾಮ ಹಳೆಕೋಟೆಯಲ್ಲಿ ನಡೆಯುತ್ತಿರುವ ಈ ಪಂದ್ಯಾಟದಲ್ಲಿ ಪೊಲೀಸ್ ಇಲೆವೆನ್, ಎಮ್.ಆರ್. ಅಟ್ಯಾಕರ್ಸ್, ಟೀಮ್ ಸಾರಥಿ ಮಲ್ಪೆ,ಮೆಸ್ಕೋಂ ಕರಾವಳಿ ಟೈಗರ್ಸ್, ಜನತಾ ಫಿಶ್ ನೆಟ್ ಕೋಟ, ಜಿಲ್ಲಾ ಆರೋಗ್ಯ ಇಲಾಖೆ, ಆಭರಣ ಚಾಲೆಂಜರ್ಸ್ ಉಡುಪಿ, ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ, ರೋಬೋಸಾಫ್ಟ್ (ಐ.ಟಿ ದಿಗ್ಗಜರು), ಪಿಪಿಎಲ್(ಎಮ್.ಸಿಎಫ್)ತಂಡಗಳು ಭಾಗವಹಿಸುತ್ತಿದೆ.
ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಕೋಟ ಸಾಲಿಗ್ರಾಮ ಇವರ ಆಶ್ರಯದಲ್ಲಿ, ಶಿವನಾರಾಯಣ ಐತಾಳ್ ಕೋಟ ಇವರ ಕ್ರಿಕೆಟ್ ವೀಕ್ಷಕ ವಿವರಣೆಯಲ್ಲಿ ಸಾರ್ಥಕ 35 ವರ್ಷಗಳ ಸವಿನೆನಪಿಗಾಗಿ ಆಯೋಜಿಸಲಾದ ಶಿವ ಬಿಗ್ ಬ್ಯಾಶ್-2025 ಕ್ರಿಕೆಟ್ ಪಂದ್ಯಾಟಕ್ಕೆ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಕೃಷ್ಣಪ್ರಸಾದ್ ಕೆ.ಚಾಲನೆ ನೀಡಿದರು. ಸ್ಪೋರ್ಟ್್ಸ ಕನ್ನಡ ಮುಖ್ಯಸ್ಥ ಕೋಟ ರಾಮಕೃಷ್ಣ ಆಚಾರ್,ಕೆ.ಎಸ್.ಸಿ.ಎ ಅಂಗೀಕೃತ ಅಂಪಾಯರ್ ಇಬ್ರಾಹಿಂ ಆತ್ರಾಡಿ, ಕಾರ್ಯಕ್ರಮ ಸಂಘಟಕ ಶಿವನಾರಾಯಣ ಐತಾಳ್ ಕೋಟ ಇದ್ದರು.














Leave a Reply