ಕೋಟ: ಶ್ರೀ ಕಂಬಿಗಾರ ಶ್ರೀ ಬಬ್ಬು ಸ್ವಾಮಿ ಶ್ರೀ ಕೊರಗಜ್ಜ ಪರಿವಾರದೈವಗಳ ದೈವಸ್ಥಾನ ಗುಂಡ್ಮಿ ಸಾಸ್ತಾನ ಇದರ ದ್ವಿತೀಯ ನೇಮೋತ್ಸವ ಮುಂದಿನ ವರ್ಷದ ಏಪ್ರಿಲ್ ತಿಂಗಳ 18 ರಂದು ನಡೆಯುತ್ತಿದ್ದು ಇದರ ಪೂರ್ವಭಾವಿಯಾಗಿ ಶ್ರೀ ಕ್ಷೇತ್ರದ ಸನ್ನಿಧಿಯಲ್ಲಿ ನೇಮೋತ್ಸವದ ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಲಾಯಿತು.
ನೇಮೋತ್ಸವ ಸಮಿತಿಯ ಅಧ್ಯಕ್ಷ ಕೇಶವ ಕುಂದರ್ ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಕೃಷ್ಣ ಆಚಾರ್ಯ ಎಡಬೆಟ್ಟು ಮತ್ತು ರಮೇಶ್ ಕಾರಂತ ಐರೋಡಿ ಸಾಂಕೇತಿಕವಾಗಿ ವಿಜ್ಞಾಪನ ಪತ್ರವನ್ನು ಸ್ವೀಕರಿಸಿ ನೇಮೋತ್ಸವಕ್ಕೆ ತಮ್ಮ ಪ್ರಥಮ ದೇಣಿಗೆಯನ್ನು ನೀಡಿದರು. ದೈವ ನರ್ತಕರಾದ ಶ್ರೀಕಾಂತ್ ಶಿರ್ವ ಮತ್ತು ತಂಡದವರು, ದೈವಸ್ಥಾನದ ಗುರಿಕಾರರು , ಅಧ್ಯಕ್ಷರು, ಮಹಿಳಾ ಸದಸ್ಯರು ,ಹಾಗು ನೂರಾರು ಭಕ್ತಾಭಿಮಾನಿಗಳು ಸೇರಿದ್ದ ಈ ಕಾರ್ಯಕ್ರಮವನ್ನು ಅಶೋಕ್ ಗುಂಡ್ಮಿ ನಿರೂಪಣೆಗೈದರು. ಹಿರಿಯರಾದ ಮಂಜು ವಂದಿಸಿದರು
ಗುಂಡ್ಮಿ ಶ್ರೀ ಕಂಬಿಗಾರ ಶ್ರೀ ಬಬ್ಬು ಸ್ವಾಮಿ ಶ್ರೀ ಕೊರಗಜ್ಜ ಪರಿವಾರದೈವಗಳ ನೇಮೋತ್ಸವ ವಿಜ್ಞಾಪನ ಪತ್ರವನ್ನು ನೇಮೋತ್ಸವ ಸಮಿತಿಯ ಅಧ್ಯಕ್ಷ ಕೇಶವಕುಂದರ್ ಬಿಡುಗಡೆ ಮಾಡಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಕೃಷ್ಣ ಆಚಾರ್ಯ ಎಡಬೆಟ್ಟು ಮತ್ತು ರಮೇಶ್ ಕಾರಂತ ಐರೋಡಿ ಇದ್ದರು.















Leave a Reply