ಕೋಟ: ಪೋಲಿಸ್ ದೌರ್ಜನ್ಯಕ್ಕೊಳಗಾದ ಅಕ್ಷತಾ ಪೂಜಾರಿಯ ಮೇಲೆ ದಾಖಲಾದ ಪ್ರಕರಣ ಕೈಬಿಟ್ಟು, ದೌರ್ಜನ್ಯ ಎಸೆಗಿದ ಪೋಲಿಸ್ ಅಧಿಕಾರಿಯನ್ನು ಈಗಿಂದಿಗಲೇ ಅಮಾನತುಗೊಳಿಸಬೇಕು ಎಂದು ಸಾಸ್ತಾನ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘದ ಪ್ರದಾನಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಆಗ್ರಹಿಸಿದ್ದಾರೆ.
ಅವರು ಮಂಗಳವಾರ ಅಕ್ಷತಾಳನ್ನು ಭೇಟಿ ಮಾಡಿದ ಬಿಲ್ಲವ ಸಂಘದ ಅಧ್ಯಕ್ಷ ಎಂ.ಸಿ ಚಂದ್ರಶೇಖರ ಹಾಗೂ ವಿಠ್ಠಲ್ ಪೂಜಾರಿ ಧೈರ್ಯ ಹಾಗೂ ಸಾಂತ್ವನಗೈದು ನಿಮ್ಮಗಾದ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಘದ ಪ್ರಮುಖರು, ಈ ಕೂಡಲೇ ಅಕ್ಷತಾ ಪೂಜಾರಿಯವ ಮೇಲೆ ದಾಖಲಿಸಿದ ಎಫ್ ಐ ಆರ್ ಅನ್ನು ತಕ್ಷಣ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರು ರದ್ದುಗೊಳಿಸಿ ಆಕೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು ಒಂದೊಮ್ಮ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾದ್ಯಂತ ಇರುವ ಸಮುದಾಯದ ಮುಖಂಡರನ್ನು ಸಂಪರ್ಕಿಸಿ ದೊಡ್ಡ ಮಟ್ಟದ ಪ್ರತಿಭಟಿಸುವ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ನೀಡಿದರು.















Leave a Reply