ಕೋಟ: ಇಲ್ಲಿನ ಸಾಲಿಗ್ರಾಮ ಪಾರಂಪಳ್ಳಿ ಪಡುಕರೆಯ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಆರನೇ ವರ್ಷದ ವಿನ್ ಲೈಟ್ ಪುರಸ್ಕಾರಕ್ಕೆ ಸಾಂಪ್ರದಾಯಿಕ ಯಕ್ಷಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಬಂಗೇರ ಆಯ್ಕೆಯಾಗಿದ್ದಾರೆ.
ಇಲ್ಲಿನ ಪಾರಂಪಳ್ಳಿ ಪಡುಕರೆಯ ಪರಿಸರದಲ್ಲಿ ಡಿಸೆಂಬರ್ 27ರಂದು ಅಶಕ್ತ ಅನಾರೋಗ್ಯ ಪೀಡಿತರ ನೆರವಿಗಾಗಿ ಹಮ್ಮಿಕೊಂಡ ಪೆರ್ಡೂರು ಮೇಳದ ಯಕ್ಷ ವೇದಿಕೆಯಲ್ಲಿ ಈ ಪುರಸ್ಕಾರ ಗಣ್ಯರ ಸಮ್ಮುಖದಲ್ಲಿ ನೆರವೆರಲಿದೆ. ಪವನಗ ಕಿರಣಕೆರೆ ಇವರ ಪ್ರಸಿದ್ಧ ಯಕ್ಷಗಾನ ಚದುರಂಗ ಅಶಕ್ತ ಅನಾರೋಗ್ಯ ಪೀಡಿತರ ಬಾಳಿನ ನೆರವಿಗಾಗಿ ಪ್ರದರ್ಶನಗೊಳ್ಳಲಿದೆ.ಎಂದು ಸಂಘಟಕರು ತಿಳಿಸಿದ್ದಾರೆ.















Leave a Reply