ವಿಶ್ವ ಮಾನವಾಧಿಕಾರ ಹಕ್ಕು ಲೋಕ ಪರಿಷತ್ ವತಿಯಿಂದ ಮಾಸಿಕ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾದ ಇಕ್ಬಾಲ್ ಕುಂಜಿಬೆಟ್ಟು ಅದ್ಯಕ್ಷತೆಯಲ್ಲಿ ಸಮಾಜ ಸೇವಕ ಜಿಲ್ಲಾ ರಾಜ್ಯೋತ್ಸ ಪ್ರಶಸ್ತಿ ಪುರಸ್ಕೃತ ಬಟರ್ ಫ್ಲೈ ಗೆಸ್ಟ್ ಹೌಸ್ & ಪಾರ್ಟಿ ಹಾಲ್ ಮಾಲಕರಾದ ಡಾ.ಫಾರೂಕ್ ಚಂದ್ರನಗರ ಇವರಿಗೆ ಉಡುಪಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಫಾರೂಕ್ ವಿಶ್ವ ಮಾನವ ದಿನಾಚರಣೆಯ ದಿನದಂದು ನನಗೆ ಸನ್ಮಾನಿಸಿದ್ದು ಖುಷಿ ತಂದಿದೆ ಈ ಸಂಸ್ಥೆ ಮಾನವೀಯತೆ ನೆಲೆಯಲ್ಲಿ ಮಾಡಿದ ಹತ್ತಾರು ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೆ ಮುಂದೆಯೂ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಜನಸಾಮಾನ್ಯರಿಗೆ ಸಹಾಯವಾಗಲಿ ಎಂದು ಶುಭ ಹಾರೈಸಿದರು
ಈ ಸಂದರ್ಭದಲ್ಲಿ ವಿಶ್ವಮಾನವಾಧಿಕಾರ ಅಂತಾರಾಷ್ಟ್ರೀಯ ಅಧ್ಯಕ್ಷರಾದ ಸಮಾಜ ರತ್ನ ಲಯನ್ ಡಾ. ಶಂಕರ್ ಶೆಟ್ಟಿ, ಉಡುಪಿ ಆತ್ಲೆಟಿಕ್ ಅಧ್ಯಕ್ಷರಾದ ಹರಿಪ್ರಸಾದ್ ರೈ, ಖ್ಯಾತ ವೈದ್ಯ ಡಾ.ಪಿ.ವಿ ಭಂಡಾರಿ, ಖ್ಯಾತ ವಕೀಲರಾದ ರವಿಕಿರಣ್ ಮುರ್ಡೇಶ್ವರ್, ನ್ಯಾಯವಾದಿ ಅಖಿಲ್ ಹೆಗ್ಡೆ, ಸಮಾಜ ಸೇವಕಿ ಆಯೇಷಾ ಕಾರ್ಕಳ, ಇಕ್ಬಾಲ್ ಮನ್ನಾ , ಗುರುನಾತ್ ಏನ್ ಕಾಮತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು














Leave a Reply