ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ತೆಕಟ್ಟೆ ವಲಯದ ಕುಂಭಾಶಿ ಕಾರ್ಯಕ್ಷೇತ್ರದ ಮಾಸಶನ ಫಲಾನುಭವಿಯಾದ ರಾಜ ಅವರಿಗೆ ವಾತ್ಸಲ್ಯ ಮನೆ ಮಂಜುರಾಗಿದ್ದು ತೆಕ್ಕಟೆ ವಲಯದ ಬೇಳೂರು ಘಟಕದ ಶೌರ್ಯ ಟೀಮ್ ಸದಸ್ಯರು ಪ್ರಥಮ ಅಂಗವಾಗಿ ಜಾಗವನ್ನು ಸಮತಟ್ಟು ಹಾಗೂ ಪಾಯ ತೆಗೆಯುವ ಕೆಲಸ ಕಾರ್ಯ ನೆರವೆರಿಸಿದರು.
ಶ್ರಮದಾನದಲ್ಲಿ ಭಾಗವಹಿಸಿದ ಶೌರ್ಯ ಟೀಮ್‌ನ ಸದಸ್ಯರಾದ ಶೌರ್ಯ ಟೀಮ್‌ನ ತಂಡದ ಪ್ರಮುಖರಾದ ರಾಜೀವಿ, ಸುಕುಮಾರ ಶೆಟ್ಟಿ ದೇಲಟ್ಟು, ಜ್ಯೋತಿ, ಸುಧೀರ, ನಾಗೇಶ್ ,ಮೇಸ್ತಿç ಮಹೇಶ್, ವಲಯದ ಮೇಲ್ವಿಚಾರಕರದ ರಾಧಿಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕವಿತ, ಸೇವಾ ಪ್ರತಿನಿಧಿ ಪ್ರಭಾವತಿ ಉಪಸ್ಥಿತರಿದ್ದರು.














Leave a Reply