Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಘನತ್ಯಾಜ್ಯ ಘಟಕದ ವಿದ್ಯುತ್ ಕೇಬಲ್ ಅಳವಡಿಗೆ ಗ್ರಾಮಸ್ಥರ ಪ್ರತಿಭಟನೆ

ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ಪಾರಂಪಳ್ಳಿ ಭಾಗದಲ್ಲಿ ಆರಂಭಿಸಿರುವ ಎಂಆರ್‌ಎಫ್ ಘಟಕಕ್ಕೆ ಹೆಚ್ಚಿನ ವಿದ್ಯುತ್ ಪೂರೈಕೆಯ ಹಿನ್ನಲ್ಲೆಯಲ್ಲಿ ಹೈಟೆಶನ್ ಕೇಬಲ್ ಅಳವಡಿಸುವ ಉದ್ದೇಶದಿಂದ ವಿದ್ಯುತ್ ಕಂಬಗಳನ್ನು ಅಳವಡಿಸುತ್ತಿದ್ದು ಈ ಹಿನ್ನಲ್ಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ವಿರೋಧಿಸಿದ ಘಟನೆ ಶನಿವಾರ ನಡೆದಿದೆ.

ಕಾನೂನು ಬಾಹಿರವಾಗಿ ಉಪ್ಪು ನೀರಿನ ಸೀತಾ ನದಿಯ ತಟದಲ್ಲಿ ಕಂಬ ಅಳವಡಿಸುವುದರಿಂದ ಇಲ್ಲಿನ ಪ್ರವಾಸೋದ್ಯಮಕ್ಕೆ ಕೃಷಿ ಕಾಯಕಕ್ಕೆ ಬಾರಿ ಸಮಸ್ಯೆ ತಂದೊಡ್ಡುತ್ತಿದೆ, ಅಲ್ಲದೆ ನದಿಯಲ್ಲೆ ಕಂಬವನ್ನು ಅಳವಡಿಸಲಾಗುತ್ತಿದೆ ಇದರಿಂದ ಸಾರ್ವಜನಿಕರಿಗೆ ಗ್ರಾಮಸ್ಥರಿಗೆ ಸಮಸ್ಯೆಯಾಗಲಿದೆ ಎಂದು ಹೋರಾಟ ಸಮಿತಿಯ ಪ್ರಮುಖ ನಾಗೇಂದ್ರ ಪುತ್ರನ್ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಮಹೇಶ್ ಪೂಜಾರಿ, ಗಣೇಶ್, ವಿಶ್ವನಾಥ್ ಮತ್ತಿತರರು ಇದ್ದರು. ಸಾಲಿಗ್ರಾಮ ಘನತ್ಯಾಜ್ಯ ಘಟಕದ ವಿದ್ಯುತ್ ಕೇಬಲ್ ಅಳವಡಿಗೆ ಗ್ರಾಮಸ್ಥರ ಪ್ರತಿಭಟನೆ ನಡೆಸಿದರು. ಹೋರಾಟ ಸಮಿತಿಯ ಪ್ರಮುಖರಾದ ಮಹೇಶ್ ಪೂಜಾರಿ,ಗಣೇಶ್,ವಿಶ್ವನಾಥ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *