ಕೋಟ: ಕೋಟ ಹೋಬಳಿಯ ಕೋಡಿಕನ್ಯಾಣದಲ್ಲಿ ಡಿ.21ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮವಾದ ಶ್ರೀದೇವಿ -ಭೂದೇವಿ ಸಹಿತ ಶ್ರೀನಿವಾಸ ದೇವರ ಉಂಜಲೋತ್ಸವ ನಡೆಯಲಿದೆ ಎಂದು ಕೋಟ ಅಮೃತೇಶ್ವರೀ ದೇಗುಲದ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿಕುಂದರ್‌ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ನ ವಿಶೇಷ ಅಧಿಕಾರಿ ವಿ| ಆನಂದತೀರ್ಥಾಚಾರ್ಯ ಪಗಡಲ್ ಅವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಈಗಾಗಲೇ ಪುರಶೃಂಗಾರ ಸಾಸ್ತಾನದಿಂದ ಹಾಗೂ ಸಾಲಿಗ್ರಾಮ, ಪಡುಕರೆಯಿಂದ ಕೋಡಿತನಕ ನೆರವೇರಿದ್ದು ಭಕ್ತರು ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಡಿ.21ರoದು ಅಪರಾಹ್ನ 2 ಗಂಟೆಗೆ ಸಾಲಿಗ್ರಾಮ ಗುರುನರಸಿಂಹ ದೇಗುಲದ ವಠಾರಕ್ಕೆ ಉಂಜಲೋತ್ಸವದ ದೇವರ ಮೂರ್ತಿ ಆಗಮಿಸಲಿದ್ದು ಅಲ್ಲಿಂದ ಮೆರ ವಣಿಗೆಯಲ್ಲಿ ಕೋಡಿಕನ್ಯಾಣದ ಸಭಾಂಗಣಕ್ಕೆ ತರಲಾಗುವುದು. 4.30ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಯೋಜಕ ಪ್ರಭಾಕರ ಮೆಂಡನ್ ತಿಳಿಸಿದರು. ರಾಜು ಅಮೀನ್, ಬಾಸ್ಕರ ಕಾಂಚನ್, ರಾಜೇಶ್ ಕರ್ಕೇರ ಉಪಸ್ಥಿತರಿದ್ದರು.
ಉಂಜಲೋತ್ಸವ ವಿಶೇಷ
ಶ್ರೀದೇವಿ ಸಹಿತ ಶ್ರೀನಿವಾಸ ದೇವರನ್ನು ಊಯ್ಯಾಲೆಯಲ್ಲಿರಿಸಿ ವಿಧ-ವಿಧದ ಪೂಜೆ, ಪುನಸ್ಕಾರಗಳನ್ನು ನೀಡಿ ದೇವರ ಊಯ್ಯಾಲೆ ತೂಗುವುದು ಉಂಜಲೋತ್ಸವದ ವಿಶೇಷತೆಯಾಗಿದೆ. ಅದೇ ರೀತಿ ಪುಷ್ಪಗಳನ್ನು ಸಮರ್ಪಿಸುವ ಮೂಲಕ ಪುಷ್ಪ ಯಾಗವನ್ನು ಕೈಗೊಳ್ಳಲಾಗುತ್ತದೆ. ಕರಾವಳಿ ಭಾಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ತುಂಬಾ ಅಪರೂಪ ಎಂದವರು ತಿಳಿಸಿದರು.














Leave a Reply