ಕುಂದಾಪುರ : ಮೀನುಗಾರಿಕೆ ಒಮ್ಮೆ ಲಾಭ ತಂದರೆ ಮತ್ತೊಮ್ಮೆ ನಷ್ಟ ತರಲಿದೆ. ಒಮ್ಮೊಮ್ಮೆ ಮೀನು ದೊರಕದೆ ಹಾಗೆಯೇ ಹಿಂದಕ್ಕೆ ಬರಬೇಕಾಗುತ್ತದೆ. ಮೀನುಗಾರರ ಸಂಕಷ್ಟ ನನಗೆ ಗೊತ್ತಿದೆ. ನನ್ನ ತಾಯಿ ಕೂಡ ಮೀನು ಮಾರಾಟ ಮಾಡುತ್ತಿರುವುದರಿಂದ ಆ ಕಷ್ಟ ಏನೆಂಬುದು ನನಗೆ ಗೊತ್ತಿದೆ. ಕಷ್ಟದಲ್ಲಿ ಜೀವನ ಮಾಡುವ ಮೀನುಗಾರರಿಗೆ ಸಹಕಾರಿ ಸಂಘಗಳಿಂದ ಆರ್ಥಿಕ ಸಹಕಾರ ದೊರಕುವಂತಾಗಬೇಕೆಂದು ಉಡುಪಿ ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ|ಜಿ.ಶಂಕರ್ ನುಡಿದರು. ಅವರು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ (ನಿ.)ದ ರಜತ ಸಂಭ್ರಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಂದು ಬಹಳಷ್ಟು ಕಷ್ಟಪಟ್ಟು ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘವನ್ನು ಆರಂಭಿಸಿದ್ದು ಇಂದು ಸದೃಢವಾಗಿ ಸಂಸ್ಥೆ ಬೆಳೆದು ನಿಂತಿದೆ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯಕುಮಾರ್ ಬಹಳ ಉತ್ತಮ ಕೆಲಸ ಮಾಡಿ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ಹೆಮ್ಮಾಡಿ ಮೀನುಗಾರರ ಸಂಸ್ಥೆ ಕಷ್ಟ ಜೀವಿಗಳ ಸಂಸ್ಥೆ. ಮೀನುಗಾರರನ್ನು ಮೇಲೆತ್ತುವ ಕೆಲಸ ಈ ಸಂಸ್ಥೆಯಿಂದ ಆಗಬೇಕು. ಸಂಸ್ಥೆ ಉಡುಪಿ ಜಿಲ್ಲಾ ವ್ಯಾಪ್ತಿಯನ್ನು ಮಾಡಿಕೊಂಡಲ್ಲಿ ಇನ್ನಷ್ಟು ಬೆಳೆಯಲಿದೆ. 1999ರಲ್ಲಿ ಪ್ರಾರಂಭವಾದ ಈ ಸಂಸ್ಥೆಯ ಇಪ್ಪತೈದರ ಸಮಾರಂಭ ನೂರು ವರ್ಷದ ಸಂಸ್ಥೆಯ ಕಾರ್ಯಕ್ರಮದಂತೆ ನಡೆದಿದೆ. ಈ ಸಂಸ್ಥೆ ಬಲಾಡ್ಯವಾಗಿ ಬೆಳೆಯಲು ಉದಯಕುಮಾರ್ ಹಟ್ಟಿಯಂಗಡಿ ಕಾರಣ. ಅವರು ಮಾಡಿದ ಕೆಲಸಕ್ಕೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗಿದೆ. ಮುಂದಿನ ವರ್ಷ ಮಾರ್ಚ್ ಒಳಗೆ 100 ಕೋಟಿ ಠೇವಣಿ ಸಂಗ್ರಹಿಸಿದಲ್ಲಿ ಮಂಗಳೂರಿಗೆ ಕರೆಸಿ ಬಂಗಾರದ ಪದಕ ನೀಡಲಿದ್ದೇನೆ. ಸಮಾರಂಭದ ವೆಚ್ಚಕ್ಕಾಗಿ ರೂ.5ಲಕ್ಷ ಮೊತ್ತ ಘೋಷಿಸುತ್ತೇನೆ ಎಂದರು.

ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ ರಜತ ಸಂಭ್ರಮ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡುತ್ತಾ ಯಾವುದೇ ಸಂಸ್ಥೆ ಬೆಳೆಯಬೇಕಾದಲ್ಲಿ ನಮಗೆ ಗಾಡ್ ಫಾದರ್ ಬೇಕು. ಈ ಸಂಸ್ಥೆಯ ಬೆಳವಣಿಗೆಗೆ ನಾಡೋಜ ಜಿ.ಶಂಕರ್ ಹಾಗೂ ಎಂ.ಎನ್.ರಾಜೇಂದ್ರ ಕುಮಾರ್ ನಿರ್ದೇಶನ ನೀಡಿದ್ದಾರೆ ಎಂದರು.
ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ, ದ.ಕ.ಮೊಗವೀರ ಮಹಾಜನ ಸಂಘ (ರಿ.)ದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮುಂಬೈ ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ)ದ ಅಧ್ಯಕ್ಷ ಸಂತೋಷ್ ಪುತ್ರನ್, ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷ ಗೋಪಾಲ ಎಸ್. ಪುತ್ರನ್, ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಉಮೇಶ್ ಪುತ್ರನ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ.) ನಿರ್ದೇಶಕ ಮಹೇಶ್ ಹೆಗ್ಡೆ, ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀಮತಿ ಕೆ.ಆರ್.ಲಾವಣ್ಯ, ಸಹಾಯಕ ನಿಬಂಧಕ ಸುಧೀರ್ ಕುಮಾರ್, ಬೆಂಗಳೂರು ಮೊಗವೀರ ಸಂಘದ ಅಧ್ಯಕ್ಷ ಶಂಕರ್ ಕುಂದರ್, ಕನಕ ಗ್ರೂಫ್ ಮಾಲಕ ಉದ್ಯಮಿ ಜಗದೀಶ್ ಶೆಟ್ಟಿ ಕುದ್ರುಕೋಡು, ಹೋಟೆಲ್ ಉದ್ಯಮಿ ನಾರಾಯಣ ರಾವ್ ಹೊಲಾಡು, ಕಟ್‌ಬೆಲ್ತೂರು ಭದ್ರ ಮಹಂಕಾಳಿ ದೇವಸ್ಥಾನದ ಅಧ್ಯಕ್ಷ ಕೆ.ಆನಂದ ಶೆಟ್ಟಿ, ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಹಕ್ಲಾಡಿ, ಮೀನುಗಾರ ಜಂಟಿ ನಿರ್ದೇಶಕ ಕುಮಾರಸ್ವಾಮಿ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ (ರಿ.)ಯ ಅಧ್ಯಕ್ಷ ಜಯಂತ ಅಮೀನ್ ಕೋಡಿ, ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಸುಮತಿ ಬಿ.ಮೊಗವೀರ, ನಿರ್ದೇಶಕರಾದ ರವೀಂದ್ರ ಜಿ.ಮೆಂಡನ್, ಶ್ರೀಮತಿ ಶ್ಯಾಮಲ ಜಿ. ಚಂದನ್, ರಾಮ ಮೊಗವೀರ ಕೊಡ್ಲಾಡಿ, ರಾಮ ಮೊಗವೀರ ಬೈಂದೂರು, ಶ್ರೀಮತಿ ಸುಶೀಲಾ ಕೆ. ಮೊಗವೀರ, ಶ್ರೀಮತಿ ವನಿತಾ ಎಸ್. ಮೊಗವೀರ, ಲೋಹಿತಾಶ್ವ ಆರ್. ಕುಂದರ್, ಶ್ರೀಮತಿ ಬಾಬಿ ಹಕ್ಲಾಡಿ, ಅಶೋಕ್ ಆರ್. ಸುವರ್ಣ ಉಪಸ್ಥಿತರಿದ್ದರು. ಸಮಾರಂಭದಲ್ಲಿ ನಾಡೋಜ ಡಾ.ಜಿ.ಶಂಕರ್‌ರವರಿಗೆ ಮತ್ಸ್ಯಜ್ಯೋತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಡಾ. ಎಂ.ಎನ್.ರಾಜೇಂದ್ರ ಕುಮಾರ್, ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಸುರೇಶ್ ಪುತ್ರನ್, ಎ.ಶೀನ ಮೊಗವೀರ, ಚಂದ್ರ ನಾಯ್ಕ್ ಕಟ್‌ಬೆಲ್ತೂರು, ಭಾಸ್ಕರ ಕೆ.ನಾಯ್ಕ್, ಸಂಸ್ಥೆಯ ಅಧ್ಯಕ್ಷ ರಾಜು ಶ್ರೀಯಾನ್, ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್, ಮಾಜಿ ನಿರ್ದೇಶಕರನ್ನು, ಹಿರಿಯ ಸಹಕಾರಿಗಳನ್ನು , ಆಡಳಿತ ಮಂಡಳಿ ನಿರ್ದೇಶಕರನ್ನು, ಸಂಸ್ಥೆಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ರಾಜು ಶ್ರೀಯಾನ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯ ನಿರ್ವಹಣಾಧಿಕಾರಿ ಉದಯಕುಮಾರ್ ಹಟ್ಟಿಯಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಾಗೂ ಅಂದು ಸಹಕರಿಸಿದವರನ್ನು ಸ್ಮರಿಸಿ ಕೃತಜ್ಞತೆ ಅರ್ಪಿಸಿಕೊಂಡರು. ಭಾಸ್ಕರ್ ಎನ್. ಮೊಗವೀರ ಪ್ರಾರ್ಥಿಸಿದ್ದು ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.















Leave a Reply