
ಕಾರ್ಕಳ : ಗರಡಿ ದರ್ಶನ ಪಾತ್ರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರ್ಗಾನ ಗ್ರಾಮದ ಲೋಕು ಪೂಜಾರಿ (98) ಅವರು ಜು. 13 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಸುಮಾರು 86 ವರ್ಷಗಳಿಂದ ಗರಡಿ ದರ್ಶನ ಪಾತ್ರಿಯಾಗಿ ಹಿರ್ಗಾನ ಪಾಡಿ ಗರಡಿ, ಹೆರ್ಮುಂಡೆ, ಕಾರ್ಕಳ, ಕಲ್ಯಾ, ಪಳ್ಳಿ, ಬೈಲೂರು, ಉಡುಪಿ ಸೇರಿದಂತೆ ವಿವಿಧ ಗರಡಿಗಳಲ್ಲಿ ಬೈದರುಗಳ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸಿದ್ದರು. ದೈವಾರಾಧನೆ ಕ್ಷೇತ್ರದ ಸೇವೆಗಾಗಿ 2022 ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿತ್ತು. ಮೃತರು ಪತ್ನಿ ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.
Leave a Reply