
ಕುಂದಾಪುರ : ಕೇಬಲ್ ಆಪರೇಟರ್ ಮದ್ದುಗುಡ್ಡೆ ಮಧುಕರ್ ಮೇಸ್ತ ನಿಧನ
ಕುಂದಾಪುರ: ಕುಂದಾಪುರ ನಗರದ ಮದ್ದುಗುಡ್ಡೆ ನಿವಾಸಿಯಾದ ಮಧುಕರ್ ಮೇಸ್ತ (52) ರವರು ಇಂದು ಬೆಳಗ್ಗೆ ನಿಧನರಾದರು.
ಮಧುಕರ ಮೇಸ್ತರವರು ಕುಂದಾಪುರ ನಗರದ ಮದ್ದುಗುಡ್ಡೆ ಹಾಗೂ ಚರ್ಚ್ ರೋಡ್ ಪರಿಸರಗಳಲ್ಲಿ ಕೇಬಲ್ ಆಪರೇಟರ್ ಕಾರ್ಯನಿರ್ವಹಿಸುತ್ತಿದ್ದರು. ಇವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Leave a Reply